ಹೈದರಾಬಾದ್: ಟೀಮ್ ಇಂಡಿಯಾ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ ಅವರ 9 ತಿಂಗಳ ಮಗಳ ಮೇಲೆ ಅತ್ಯಾಚಾರ ಬೆದರಿಕೆ ಹಾಕಿದ್ದ ಆರೋಪಿಯನ್ನು ಹೈದರಾಬಾದ್ ಪೋಲಿಸರು ಬಂಧಿಸಿದ್ದಾರೆ.
ಬಂಧಿತ ಆರೋಪಿ ರಾಮ್ ನಾಗೇಶ್ ಶ್ರೀನಿವಾಸ್ ಅಕುಬತಿನಿ. ಟಿ-20 ವಿಶ್ವಕಪ್ನ ಆರಂಭದ ಪಂದ್ಯದ ಎದುರಾಳಿ ಪಾಕಿಸ್ತಾನ ವಿರುದ್ಧ ಟೀಮ್ ಇಂಡಿಯಾ ಸೋಲು ಕಾಣುತ್ತಿದ್ದಂತೆ ಟ್ವಿಟರ್ನಲ್ಲಿ, ಕೊಹ್ಲಿ ಪುತ್ರಿಗೆ ಅತ್ಯಾಚಾರದ ಬೆದರಿಕೆ ಹಾಕಿದ್ದ.
ಆಗ ಮುಂಬೈ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ರು. ಪ್ರಕರಣ ಭೇದಿಸಿದ ಪೊಲೀಸರು ಯುವಕರನ್ನ ಹೈದರಾಬಾದ್ನಲ್ಲಿ ಬಂಧಿಸಿದ್ರು. ಇದೀಗ ಮುಂಬೈನ ಜೈಲಿನಲ್ಲಿದ್ದಾರೆ.
ಹೈದರಾಬಾದ್ ಕಂಪನಿಯೊಂದರಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿದ್ದ ಶ್ರೀನಿವಾಸ್, ಒಂದು ತಿಂಗಳ ಹಿಂದೆ ಬೆಂಗಳೂರಿನ ಪ್ರಮುಖ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ರು. USನಲ್ಲಿ ಸ್ನಾತಕೋತ್ತರ ಪದವಿಗಾಗಿ ತಯಾರಿ ಮಾಡಿಕೊಳ್ಳಲು ತಮ್ಮ ಕೆಲಸವನ್ನ ತೊರೆದಿದ್ದ.
ಇನ್ನು ಕುಟುಂಬ ಸದಸ್ಯರು ಹೇಳುವಂತೆ SSLC ವಿದ್ಯಾಭ್ಯಾಸದಲ್ಲಿ ಟಾಪರ್ ಆಗಿದ್ದ. IIT-JEE ಪರೀಕ್ಷೆಯಲ್ಲಿ 2367 ಱಂಕ್ ಕೂಡ ಪಡೆದಿರುವ ರಾಮ್ ನಾಗೇಶ್, ಕೆಲವೇ ದಿನಗಳಲ್ಲಿ US ವಿಶ್ವವಿದ್ಯಾನಿಲಯಕ್ಕೆ ಹೋಗಬೇಕಿತ್ತು. ಪಾಕ್ ವಿರುದ್ಧ ಭಾರತ ಸೋಲಿನಿಂದಾಗಿ ತೀವ್ರ ಬೇಸrಕ್ಕೆ ಒಳಗಾಗಿ ಅತ್ಯಾಚಾರ ಬೆದರಿಕೆ ಪೋಸ್ಟ್ ಹಾಕಿದ್ದಾಗಿ ಹೇಳಿಕೆ ನೀಡಿದ್ದಾನೆ.
ಆಕಸ್ಮಿಕವಾಗಿ ತಮ್ಮ ಮಗ ಅತ್ಯಾಚಾರ ಬೆದರಿಕೆಯ ಪೋಸ್ಟ್ ಮಾಡಿದ್ದಾರೆ ಎಂದು ಅವರ ಕುಟುಂಬಸ್ಥರು ಹೇಳಿಕೊಂಡಿದ್ದಾರೆ. ಕನ್ನಡಕ ಹಾಕಿದ್ದ ಆತ, ಅದನ್ನು ತೆಗೆದ ಬಳಿಕ ತಪ್ಪಾಗಿ ಟೈಪ್ ಮಾಡಿರಬೇಕು. ತಕ್ಷಣವೇ ಪೋಸ್ಟ್ ಅನ್ನು ಅಳಿಸಿದ್ದಾನೆ ಎಂದು ಆರೋಪಿ ತಂದೆ ಹೇಳಿದ್ದಾರೆ.