ಪುತ್ತೂರು: ದ. ಕ. ಜಿ. ಪಂ. ಹಿ. ಪ್ರಾ. ಶಾಲೆ ಸಾಮೆತಡ್ಕದಲ್ಲಿ “ಮಕ್ಕಳ ದಿನಾಚರಣೆ” ಕಾರ್ಯಕ್ರಮವು ನ.14 ರಂದು ಜರುಗಿತು.
ಮಕ್ಕಳಿಂದಲೇ ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಪಂಡಿತ್ ಜವಹಾರಲಾಲ್ ನೆಹರೂರವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಸೆಂಟ್ರಲ್ ಸಂಸ್ಥೆಯವರು ಶಾಲೆಗೆ ಉತ್ತಮ ಗುಣಮಟ್ಟದ ಪ್ರಿಂಟರ್ ಖರೀದಿಸಲು ಬೇಕಾದ ಚೆಕನ್ನು ಸಾಮೆತಡ್ಕ ಚಾರಿಟೇಬಲ್ (ರಿ )ಅಧ್ಯಕ್ಷರಿಗೆ ವಿತರಿಸಿದರು.
ಮಕ್ಕಳಿಗೆ ಉಪಯುಕ್ತವಾದ ಒಳಾಂಗಣ ಆಟಿಕೆಯನ್ನು ಶಾಲೆಯ ಯುಕೆಜಿ ವಿದ್ಯಾರ್ಥಿನಿಯಾದ ಸಂಜನಾ ಪ್ರಭು ಪೋಷಕರು ಈ ಸಂದರ್ಭದಲ್ಲಿ ನೀಡಿದರು. ಬೇಕಾದ ಕುಡಿಯುವ ನೀರಿನ ವ್ಯವಸ್ಥೆಯನ್ನು ಮಾಜಿ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಶಬ್ಬೀರ್, ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಟ್ರಸ್ಟಿಯಾದ ಮೀನಾಕ್ಷಿ ಮೇಡಂ, ಊಟಕ್ಕೆ ಬೇಕಾದ ತರಕಾರಿ ವ್ಯವಸ್ಥೆಯನ್ನು ಟ್ರಸ್ಟಿಯಾದ ತವೀಜ್ ನೀಡಿ ಸಹಕರಿಸಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಪಂಚಾಕ್ಷರಿ,ನಗರ ಸಭಾ ಸದಸ್ಯರಾದ ಮನೋಹರ್, ಶಾಲೆ ಸಾಮೆತಡ್ಕ ಚಾರಿಟೇಬಲ್ ಟ್ರಸ್ಟ್ (ರಿ) ಅಧ್ಯಕ್ಷರಾದ ಗೋಪಾಲಕೃಷ್ಣ ಭಟ್,ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷರಾದ ಆರ್.ಟಿ.ಎನ್.ನವೀನ್ ನಾಯಕ್, ಆರ್.ಟಿ.ಎನ್. ಸಂತೋಷ್ ಶೆಟ್ಟಿ, ಆರ್.ಟಿ.ಎನ್. ರಫೀಕ್, ಆರ್.ಟಿ.ಎನ್. ರಾಕೇಶ್ ಶೆಟ್ಟಿ ಆರ್.ಟಿ.ಎನ್. ವೆಂಕಟ್ ರಾಜ್ ಹಾಗೂ ಟ್ರಸ್ಟ್ ಪ್ರತಿನಿಧಿ , ಸಾಮೆತಡ್ಕ ಯುವಕ ಮಂಡಲದ ಅಧ್ಯಕ್ಷರಾದ ಶ್ರೀನಾಥ್, ಯುವಕ ಮಂಡಲ ಸದಸ್ಯರು ಉಪಸ್ಥಿತರಿದ್ದರು.
ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಮಾಡಿ ಬಹುಮಾನ ವಿತರಿಸಲಾಯಿತು. ನಂತರ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಟ್ರಸ್ಟಿಯಾದ ಇಂದಿವರ್ ಭಟ್, ದಿನೇಶ್ ಕಾಮತ್ ಹಿರಿಯ ವಿದ್ಯಾರ್ಥಿಯಾದ ಫಾಯಿಜ್, ಹರ್ಷಿತ್,ಶಿಕ್ಷಕರಾದ ಕಾವ್ಯ, ಲಿಖಿತ, ವೇದಾವತಿ ಸಹಕರಿಸಿದರು. ಮುಖ್ಯ ಗುರುಗಳಾದ ಮೀನಕುಮಾರಿ ಸ್ವಾಗತಿಸಿ, ಸಹಶಿಕ್ಷಕಿ ಶ್ರೀಮತಿ ಮರಿಯಾ ಎಂ.ಎ ಕಾರ್ಯಕ್ರಮ ನಿರೂಪಿಸಿದರು.