ಪುತ್ತೂರು: ಬೂಡಿಯಾರು ಹೊಸಮನೆ ಶ್ರೀ ಚಕ್ರ ರಾಜರಾಜೇಶ್ವರಿ ದೇವರ ಜಾತ್ರೋತ್ಸವ ಹಾಗೂ ದೈವಗಳ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಕ್ಷೇತ್ರದ ತಂತ್ರಿಗಳಾದ ಪ್ರೀತಂ ಪುತ್ತುರಾಯರು ದೇವರಿಗೆ ಪ್ರಾರ್ಥನೆ ಸಲ್ಲಿಸಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಶ್ರೀ ಕ್ಷೇತ್ರದ ಅಧ್ಯಕ್ಷರಾದ ಗಂಗಾಧರ ಅಮೀನ್ ಹೊಸಮನೆ, ಬ್ರಹ್ಮಕಲಶೋತ್ಸವದ ಅಧ್ಯಕ್ಷರಾದ ಸಿಟಿ ಸುರೇಶ್, ಕಾರ್ಯದರ್ಶಿ ಜಯಂತ್ ಶೆಟ್ಟಿ ಕಂಬಳದಡ್ಡ,ಗ್ರಾಮ ಪಂಚಾಯತ್ ಉಪಾಧ್ಯಕ್ಷರಾದ ಪೂರ್ಣಿಮಾ ಶೆಟ್ಟಿ, ಕ್ಷೇತ್ರದ ಧರ್ಮದರ್ಶಿಗಳಾದ ಸುರೇಶ್ ಪೆಲತ್ತಡಿ, ವರಮಹಾಲಕ್ಷ್ಮೀ ಪೂಜಾ ಸಮಿತಿಯ ಅಧ್ಯಕ್ಷರಾದ ಭವ್ಯ ರಾಘವೇಂದ್ರ ಶೆಟ್ಟಿ ಕಾರ್ಯದರ್ಶಿ ನಳಿನಿ ಕೊಲ್ಯ, ಬಾಲವಿಕಾಸ ಸಮಿತಿಯ ಅಧ್ಯಕ್ಷರಾದ ಸೌಮ್ಯ ಮನಿತ್ ಹೊಸಮನೆ, ಅಂಗನವಾಡಿ ಶಿಕ್ಷಕಿ ಶ್ಯಾಮಲಾ ವಸಂತ್, ಧನಂಜಯ ಶೆಟ್ಟಿ ಮೇರ್ಲ, ಶೇಷಪ್ಪ ಗೌಡ (ಪಿ.ಎಸ್.ಐ.), ನಯನ ಪ್ರದೀಪ್ ಟಿ, ಉದಯ ರೈ ಮೇರ್ಲ, ಶೋಭಾ ಕೃಷ್ಣಪ್ಪ ಗೌಡ, ಸುನಂದ ಜಯರಾಮ್ ಹಾಗೂ ಸದಸ್ಯರು ಉಪಸ್ಥಿತರಿದ್ದರು.