ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲು ಪ್ರಕರಣದಲ್ಲಿ ಸಂತ್ರಸ್ತ ಮಗು ಡಿಎನ್ಎ ರಿಪೋರ್ಟ್ ಬರುವ ಮೊದಲೆ ಸಾವನ್ನಪ್ಪಿದೆ.
ಅ.15 ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಕುಂದಾಪುರ ಮೂಲದ ಮಹಿಳೆಯೊಬ್ಬರು ಮಗುವಿಗೆ ಜನ್ಮ ನೀಡಿದ್ದರು.
ಮಗು ಜನಿಸಿದ ವೇಳೆ ಹೆಣ್ಣು ಮಗು ಎಂದು ಆಸ್ಪತ್ರೆ ಸಿಬ್ಬಂದಿಗಳು ತಿಳಿಸಿ, ಮಗು ಕೈಗೆ ನೀಡುವಾಗ ಗಂಡು ಮಗು ನೀಡಿದ್ದಾರೆ. ಮಗುವನ್ನು ಅದಲು ಬದಲು ಮಾಡಿ ನೀಡಿದ್ದಾರೆ ಎಂದು ಆರೋಪಿಸಿದ್ದರು. ಬಂದರ್ ಠಾಣೆಯಲ್ಲಿ ಮಗು ಅದಲು ಬದಲು ಆಗಿದೆ ಎಂದು ದೂರನ್ನು ನೀಡಿದ್ದರು.
ಪೋಷಕರ ಆರೋಪದ ಹಿನ್ನೆಲೆಯಲ್ಲಿ ಮಗುವಿನ ಡಿಎನ್ಎ ಮಾದರಿಯನ್ನು ಹೈದರಾಬಾದ್ ಗೆ ಕಳುಹಿಸಲಾಗಿತ್ತು. ಆದರೆ ವರದಿ ಕೈ ಸೇರುವ ಮೊದಲೆ ಮಗು ಸಾವನ್ನಪ್ಪಿದೆ.