ಪುತ್ತೂರು:ಕೊಡಿಪ್ಪಾಡಿ ಗೋವುಗಳನ್ನು ಕಳೆದು ಕೊಂಡ ಲಕ್ಷ್ಮಣ ರವರ ಮನೆಗೆ ಹಿಂದೂ ಜಾಗರಣಾ ವೇದಿಕೆ ಪ್ರಮುಖರು ಮನೆಗೆ ಭೇಟಿ ನೀಡಿ ಮನೆಯವರಿಗೆ ಧೈರ್ಯ ತುಂಬಿದರು.
ಹಿಂಜಾವೇ ಮುಖಂಡರು ಪುತ್ತೂರು ನಗರ ಪೊಲೀಸ್ ಠಾಣೆಗೆ ತೆರಳಿ, ಘಟನೆಯನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಮುಂದಿನ ದಿನ ಈ ಘಟನೆಯ ವಿರುದ್ದ ದೊಡ್ಡ ಮಟ್ಟದ ಹೋರಾಟ ಮಾಡಬೇಕಾದೀತು ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.
ಈ ಸಂದರ್ಭದಲ್ಲಿ ಹಿಂದು ಸಂಘಟನೆ ಮುಖಂಡ ಅರುಣ್ ಕುಮಾರ್ ಪುತ್ತಿಲ,ಹಿಂದು ಜಾಗರಣ ವೇದಿಕೆ ಮಂಗಳೂರು ವಿಭಾಗ ಕಾರ್ಯದರ್ಶಿ ಚೆನ್ನಯ್ ಈಶ್ವರಮಂಗಲ, ಪುತ್ತೂರು ತಾಲೂಕು ಅಧ್ಯಕ್ಷ ಅಶೋಕ್ ತ್ಯಾಗರಾಜ ನಗರ,ನಗರ ಕಾರ್ಯದರ್ಶಿ ಮನೀಶ್ ಬನ್ನೂರು,ಗ್ರಾಮ ಪಂಚಾಯತ್ ಸದಸ್ಯ ನವೀನ್ ಕೂಡಿಪ್ಪಾಡಿ, ಮನ್ಮಥ ಶೆಟ್ಟಿ ಕೊಡಿಪ್ಪಾಡಿ,ಹಿಂದು ಜಾಗರಣ ವೇದಿಕೆ
ಕೊಡಿಪ್ಪಾಡಿ ಘಟಕದ ಅಧ್ಯಕ್ಷ ಸಂತೋಷ್,ಕಾರ್ಯಕರ್ತರಾದ ಜಯರಾಮ್, ನಾಗರ್, ಲಕ್ಷ್ಮಣ ಗೌಡ, ಸಂತೋಷ, ಸುಶಪ್, ದೇವರಾಜ್, ತೇಜಸ್, ಪ್ರಣಾಮ್, ತಿಲಕ್, ಕಾರ್ತಿಕ್, ಪ್ರೀತಮ್
ಮತ್ತಿತರರು ಉಪಸ್ಥಿತರಿದ್ದರು.