ಬಂಟ್ವಾಳ: ಎಚ್.ಟಿ. ವಿದ್ಯುತ್ ಲೈನ್ ವೀಕ್ ಆಗಿ ತುಂಡಾಗಿ ಬಿದ್ದು ಹಲವು ಮನೆಗಳ ವಯರಿಂಗ್ ಹಾಗೂ ವಿದ್ಯುತ್ ಪರಿಕರಗಳು ಸುಟ್ಟು ಭಸ್ಮವಾದ ಘಟನೆ ಶಂಭೂರು ಗ್ರಾಮದ ಅಡೆಪಿಲದಲ್ಲಿ ನಡೆದಿದೆ.
ಇನ್ನು ಘಟನೆಯಿಂದ ಸ್ಥಳೀಯ ನಿವಾಸಿಗಳಾದ ವಿನ್ಸೆಂಟ್ ಬ್ಯಾಪ್ಟಿಸ್ಟ್, ಗಿಲ್ಬರ್ಟ್ ಪಿಂಟೋ, ವಿಲಿಯಂ ಪಿಂಟೋ ಅವರ ಪಂಪುಸೆಟ್ ಗಳು ಸುಟ್ಟು ಹೋಗಿವೆ ಎಂದು ತಿಳಿದು ಬಂದಿದೆ.
ಜೈಸನ್ ಪಿಂಟೋ ಅವರ ಮನೆ ಸೇರಿದಂತೆ ಹಲವು ಮನೆಗಳ ವಿದ್ಯುತ್ ವಯರಿಂಗ್, ಸಲಕರಣೆಗಳು ಸಂಪೂರ್ಣ ಸುಟ್ಟಿವೆ. ವಯರಿಂಗ್ ದುರಸ್ತಿ ಮಾಡಿ ಕೊಡುವುದಾಗಿ ಮೆಸ್ಕಾಂನವರು ಭರವಸೆ ನೀಡಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.