ಪುತ್ತೂರು: ಕೊಂಬೆಟ್ಟು ವಿದ್ಯಾರ್ಥಿಗಳ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿ ಕೆಲವರನ್ನು ವಿದ್ಯಾರ್ಥಿಗಳನ್ನು ಮಹಿಳಾ ಪೊಲೀಸ್ ಠಾಣೆಗೆ ಕರೆದೊಯ್ದ ವಿಚಾರಕ್ಕೆ ಸಂಬಂಧಿಸಿದಂತೆ ಹಿಂದೂ ಜಾಗರಣ ವೇದಿಕೆ ಕಾರ್ಯಕರ್ತರು ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಜಮಾಯಿಸಿದ್ದು, ಈ ಸಂದರ್ಭದಲ್ಲಿ ಆಗಮಿಸಿದ ಡಿವೈಎಸ್ ಪಿ ರವರು ಹಿಂದೂ ಜಾಗರಣ ವೇದಿಕೆ ಮುಖಂಡರು ಮತ್ತು ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಗನ್ನಿವಾಸ್ ರಾವ್ ಮಾತುಕತೆ ನಡೆಸಿದರು.
ಮಾತುಕತೆ ಮುಗಿದ ಬಳಿಕ ಮಾತನಾಡಿದ ಕಾಲೇಜು ಎಸ್.ಡಿ.ಎಂ.ಸಿ. ಅಧ್ಯಕ್ಷರಾದ ಜಗನ್ನಿವಾಸ್ ರಾವ್, ‘ಯಾವುದೇ ಗೊಂದಲವಿಲ್ಲ, ಕಾಲೇಜಿನಲ್ಲಿ ನಡೆದ ಅಹಿತಕರ ಘಟನೆ ಕುರಿತಾಗಿ ಪ್ರಾಂಶುಪಾಲರು ಹಾಗೂ ಆಡಳಿತ ಮಂಡಳಿ ನೀಡಿದ ದೂರಿನ ಮೇರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಗಮನಿಸಿ ಕೆಲ ವಿದ್ಯಾರ್ಥಿಗಳನ್ನು ಕೌನ್ಸಿಲಿಂಗ್ ಗಾಗಿ ಕರೆತರಲಾಗಿದೆ’. ‘ಅಹಿತಕರ ಘಟನೆಗೆ ಸರಿಯಾದ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಡಿವೈಎಸ್ ಪಿ ಭರವಸೆ ನೀಡಿದ್ದಾರೆ ಎಂದರು.
ಹಿಂಜಾವೇ ಮುಖಂಡರು ಹಾಗೂ ಡಿವೈಎಸ್ ಪಿ ಮಧ್ಯೆ ನಡೆದ ಮಾತುಕತೆ ಫಲಪ್ರದವಾಗಿದ್ದು , ಸಂಘಟನೆಯ ಮುಖಂಡರನ್ನು ಮನವೊಲಿಸುವಲ್ಲಿ ಡಿವೈಎಸ್ ಪಿ ಸಫಲರಾಗಿದ್ದಾರೆ.
ಮಾತುಕತೆ ನಡೆಸಿ ಹೊರ ಬಂದ ಹಿಂಜಾವೇ ಮುಖಂಡ ಅಜಿತ್ ರೈ ಹೊಸಮನೆ ಮಾತನಾಡಿ, ‘ವಿದ್ಯಾರ್ಥಿಗಳ ನಡುವಿನ ಹಲ್ಲೆ ಪ್ರಕರಣ ಅಥವಾ ಇನ್ನಾವ ವಿಚಾರದಲ್ಲೂ ಯಾವುದೇ ಸಂಘಟನೆ ಇನ್ ಟರ್ ಫಿಯರ್ ಆಗಬಾರದು. ಅಪ್ರಾಪ್ತ ವಿದ್ಯಾರ್ಥಿಗಳನ್ನು ಅದರದ್ದೇ ಆದ ರೀತಿಯಲ್ಲಿ ತನಿಖೆ ಮಾಡಲಾಗುವುದು ಎಂದು ಡಿವೈಎಸ್ಪಿ ಡಾ. ಗಾನ ಪಿ ಕುಮಾರ್ ರವರು ನೀಡಿದ ಭರವಸೆಯಂತೆ ಧರಣಿ ಹಿಂಪಡೆಯಲಿದ್ದೇವೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಹಿಂದೂ ಮುಖಂಡರಾದ ರತ್ನಾಕರ ಶೆಟ್ಟಿ ಕಲ್ಲಡ್ಕ, ಜಗದೀಶ್ ನೆತ್ತರಕೆರೆ, ಕೆ.ಪಿ. ಶೆಟ್ಟಿ ಹಾಗೂ ಮತ್ತಿತರರು ಉಪಸ್ಥಿತರಿದ್ದರು.