ಪುತ್ತೂರು: ಹಿಂದೂ ಜಾಗರಣ ವೇದಿಕೆ ಪೆರ್ಲಂಪಾಡಿ ಮತ್ತು ಷಣ್ಮುಖದೇವ ಭಜನಾ ಮಂದಿರ ಪೆರ್ಲಂಪಾಡಿ ಇದರ ನೇತೃತ್ವದಲ್ಲಿ ನ.28 ರಂದು ಪೆರ್ಲಂಪಾಡಿ ಶ್ರೀಷಣ್ಮುಖದೇವ ಭಜನಾ ಮಂದಿರದಲ್ಲಿ ಲೋಕಕಲ್ಯಾಣಾರ್ಥವಾಗಿ ನಡೆಯಲಿರುವ ಸಾರ್ವಜನಿಕ ಶ್ರೀಸತ್ಯನಾರಾಯಣ ಪೂಜಾ ಕಾರ್ಯಕ್ರಮಕ್ಕೆ ಸ್ವಾಗತ ಬಯಸಿ ಸಿದ್ದ ಮೂಲೆ ಜಂಕ್ಷನ್ ನಲ್ಲಿ ಅಳವಡಿಸಿದ್ದ ಬ್ಯಾನರ್ ಗೆ ಯಾರೋ ಕಿಡಿಗೇಡಿಗಳು ತಡರಾತ್ರಿ ಕಲ್ಲೆಸೆದು ಹಾನಿಗೊಳಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಕಾರ್ಯಕ್ರಮಕ್ಕೆ ಸ್ವಾಗತ ಬಯಸಿ ಅಳವಡಿಸಿದ್ದ ಬ್ಯಾನರ್ ಗೆ ಕಲ್ಲೆಸದ್ದರಿಂದ ಬ್ಯಾನರ್ ಹಾನಿಗೊಳಗಾಗಿದ್ದು, ಈ ರೀತಿಯ ದುಷ್ಕೃತ್ಯವೆಸಗಿದ ಕಿಡಿಗೇಡಿಗಳಿಗೆ ಶಿಕ್ಷೆಯಾಗಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ..