ಮಂಗಳೂರು: ತನ್ನ ಮಗನ ಚೊಚ್ಚಲ ಚಿತ್ರದ ಬಿಡುಗಡೆಗೂ ಮೊದಲು ತುಳುನಾಡಿನ ದೈವ ದೇವರುಗಳ ಆಶೀರ್ವಾದ ಪಡೆಯುವ ಉದ್ದೇಶದಿಂದ ಬಾಲಿವುಡ್ ತಾರೆ ಸುನೀಲ್ ಶೆಟ್ಟಿ ರವರು ಮಗ ಅಹಾನ್ ಶೆಟ್ಟಿ ರೊಂದಿಗೆ ನ.28 ರಂದು ತಮ್ಮ ಹುಟ್ಟೂರು ಮಂಗಳೂರಿಗೆ ಭೇಟಿ ನೀಡಿದರು.
ಮಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ತನ್ನ ಮಾತೃ ಭಾಷೆ ತುಳುವಿನಲ್ಲಿ ಮಾತನಾಡಿದ ತುಳುನಾಡಿನ ಕುವರ ಸುನೀಲ್ ಶೆಟ್ಟಿ, ‘ಚೊಚ್ಚಲ ಚಿತ್ರ ಬಿಡುಗಡೆಯ ಮೊದಲು ಮಗನಿಗೆ ಬಪ್ಪನಾಡಿನ ದುರ್ಗಾಪರಮೇಶ್ವರಿ ತಾಯಿಯ ಆಶೀರ್ವಾದ ಸಿಗಲಿ ಎಂಬ ಉದ್ದೇಶದಿಂದ ವ್ಯಸ್ತ ಶೆಡ್ಯೂಲ್ ನ ನಡುವೆಯೂ ಭೇಟಿ ನೀಡಿದೇವು. ಇಲ್ಲಿನ ದೇವಿ, ದೇವರುಗಳ ಆಶೀರ್ವಾದ ಪಡೆಯುವುದು ಒಳ್ಳೆಯದು. ಧರ್ಮಸ್ಥಳ, ಸುಬ್ರಹ್ಮಣ್ಯ ಮತ್ತು ಬಪ್ಪನಾಡು ದುರ್ಗಾಪರಮೇಶ್ವರಿ ಆಶೀರ್ವಾದ ಪಡೆಯಲು ನಾನು ಹೆಚ್ಚಾಗಿ ಇಲ್ಲಿಗೆ ಬರುತ್ತೇನೆ. ತೇರು, ಹೂವಿನ ಪೂಜೆ, ನಾಗ ಪೂಜೆ ಎಲ್ಲದಕ್ಕೂ ನಾನು ಭೇಟಿ ನೀಡುತ್ತಿದೆ. ಅಹನ್ ಕೂಡ ಮಂಗಳೂರಿಗೆ ಬಂದು ಚಿತ್ರ ಬಿಡುಗಡೆಗೆ ಮುನ್ನ ದೇವರ ಆಶೀರ್ವಾದ ಪಡೆಯಲು ಬಯಸಿದ್ದ’ ಎಂದರು.
ನನಗೆ ಕಷ್ಟಗಳು ಎದುರಾದಗಲೆಲ್ಲ ನನ್ನ ಆತ್ಮಸ್ಥೈರ್ಯವನ್ನು ಗಟ್ಟಿ ಮಾಡುತ್ತಿದ್ದದ್ದು ತಾಯಿ ದುರ್ಗಾಪರಮೇಶ್ವರಿ. ಹೀಗಾಗಿಯೆ ನಾನು ಬಾಲಿವುಡ್ ಚಿತ್ರರಂಗದಲ್ಲಿ ನೆಲೆ ನಿಲ್ಲಲು ಸಾಧ್ಯವಾಯಿತು ಎಂದರು.
ಅಹಾನ್ ಶೆಟ್ಟಿ ಮತ್ತು ತಾರಾ ಸುತಾರಿಯಾ ನಟಿಸಿರುವ ನವಿರಾದ ಪ್ರೇಮ ಕಥೆ ಹಾಗೂ ಆಕ್ಷನ್ ಹೊಂದಿರುವ ಭರಪೂರ ಮನರಂಜನೆಯನ್ನು ಹೊಂದಿರುವ ಹಿಂದಿ ಚಿತ್ರ ‘ತಡಪ್‘ ಡಿ. 3 ರಂದು ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ಮಿಲನ್ ಲುಥ್ರಿಯಾ ಅಕ್ಷನ್ ಕಟ್ ಹೇಳಿರುವ ಸಾಜಿದ್ ನಾಡಿಯಾಡ್ವಾಲಾ ಮತ್ತು ಫಾಕ್ಸ್ ಸ್ಟಾರ್ ಸ್ಟುಡಿಯೋ ಬ್ಯಾನರ್ ನಡಿಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ವಿಶೇಷ ಎಂದರೇ ಸುನೀಲ್ ಶೆಟ್ಟಿಯವರ ಮೊದಲ ಚಿತ್ರವನ್ನು ನಿರ್ಮಿಸಿದ ನಿರ್ಮಾಪಕರೇ ಅವರ ಮಗನ ಮೊದಲ ಚಿತ್ರವನ್ನು ನಿರ್ಮಿಸಿದ್ದಾರೆ..