ಸುಬ್ರಹ್ಮಣ್ಯ: ಬಾರ್‌ವೊಂದರಲ್ಲಿ ರಾತ್ರಿ ಹೊಡೆದಾಟ ನಡೆದಿದ್ದು, ಈ ಕುರಿತಾಗಿ ಐವರ ಮೇಲೆ ಸುಬ್ರಹ್ಮಣ್ಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.
ಸಚಿನ್, ದಿನೇಶ್, ವರ್ಷಿತ್, ಹರ್ಷಿತ್, ರಕ್ಷಿತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಗುತ್ತಿಗಾರಿನ ಮಧು ಬಾರ್ & ರೆಸ್ಟೋರೆಂಟ್ ನಲ್ಲಿ ನ.28 ರಾತ್ರಿ ಈ ಘಟನೆ ನಡೆದಿದ್ದು, ಬಾರ್ ಗೆ ಆಗಮಿಸಿದ ಯುವಕರು ಬಿಲ್ ವಿಚಾರವಾಗಿ ಕ್ಯಾಶಿಯರ್ ಬಳಿ ಚೌಕಾಸಿ ನಡೆಸಿದ್ದು, ಈ ಬಗ್ಗೆ ಕ್ಯಾಶಿಯರ್ ಬಾರ್ ಮಾಲಕರೊಂದಿಗೆ ಅವರನ್ನು ಚರ್ಚಿಸುವಂತೆ ಹೇಳಿದ್ದರೆನ್ನಲಾಗಿದೆ.
ಯುವಕರು ಬಾರ್ ಮಾಲಕರೊಂದಿಗೆ ಮಾತನಾಡುತ್ತಾ ಹಲ್ಲೆ ನಡೆಸಲು ಮುಂದಾಗಿದ್ದಾರೆ ಎನ್ನಲಾಗಿದೆ, ಈ ಬಗ್ಗೆ ಬಾರ್ ಮಾಲಕ ಹರ್ಷಿತ್ ಸುಬ್ರಹ್ಮಣ್ಯ ಠಾಣೆಯಲ್ಲಿ ದೂರು ನೀಡಿದ್ದು, ಈ ಕುರಿತಾಗಿ ಐವರ ಮೇಲೆ ಪ್ರಕರಣ ದಾಖಲಾಗಿದೆ
ಹಲ್ಲೆ ಸಂದರ್ಭ ಅದೇ ಸ್ಥಳದಲ್ಲಿದ್ದ ಮತ್ತೋರ್ವ ವ್ಯಕ್ತಿಗೂ ಇದೇ ಯುವಕರು ಹೊಡೆದಿರುವುದಾಗಿ ತಿಳಿದು ಬಂದಿದ್ದು, ಅವರೂ ಠಾಣೆಗೆ ದೂರು ನೀಡಿದ್ದಾರೆನ್ನಲಾಗಿದೆ.