ಪುತ್ತೂರು: ಮೈಸೂರುನಿಂದ ಕೃಷಿ ಜಮೀನು ನೋಡಲು ಬಂದಿದ್ದ ಫೋಟೋಗ್ರಾಫರ್ ಕೊಲೆ ಪ್ರಕರಣ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಪಡುವನ್ನೂರು ಗ್ರಾಮ, ಪಟ್ಲಡ್ಕ ನಿವಾಸಿ ಬಾಲಕೃಷ್ಣ(59), ಪ್ರಶಾಂತ್ (28), ಪಡುವನ್ನೂರು ಗ್ರಾಮ, ಪಟ್ಲಡ್ಕ ನಿವಾಸಿ ಜೀವನ್ ಪ್ರಸಾದ್ (39), ಪಡುವನ್ನೂರು ಗ್ರಾಮ, ಪಟ್ಲಡ್ಕ ನಿವಾಸಿ ಜಯಲಕ್ಷ್ಮೀ (58), ಬಡಗನ್ನೂರು ಗ್ರಾಮ ಅನಿಲ ನಿವಾಸಿ ಜಯರಾಜ್ ಶೆಟ್ಟಿ (47) ಎನ್ನಲಾಗಿದೆ.
ಮೈಸೂರು ಸುಬ್ರಹ್ಮಣ್ಯ ನಗರದ ವೃತ್ತಿಯಲ್ಲಿ ಫೋಟೋಗ್ರಾಫರ್ ಆಗಿದ್ದ ಜಗದೀಶ ರೈ ರವರು ಪುತ್ತೂರು ತಾಲೂಕು ಆರ್ಯಾಪು ಗ್ರಾಮದ ಕುಂಜೂರುಪಂಜ ಎಂಬಲ್ಲಿ ಮತ್ತು ಪಡುವನ್ನೂರು ಗ್ರಾಮದ ಪಟ್ಲಡ್ಕ ಎಂಬಲ್ಲಿರುವ ತಮ್ಮ ಕೃಷಿ ಜಮೀನನ್ನು ನೋಡಲೆಂದು ನ.18 ರಂದು ಮೈಸೂರಿನಿಂದ ಬಂದು ವಾಪಾಸ್ಸು ಮೈಸೂರಿಗೆ ಹೋಗದೆ ಕಾಣೆಯಾಗಿರುವುದಾಗಿ ಅವರ ಅಣ್ಣ ಶಶಿಧರ
ಕಾವೂರು ರವರು ನೀಡಿದ ದೂರಿನಂತೆ ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅಕ್ರ 101/2021 ಕಲಂ ನಾಪತ್ತೆ ಪ್ರಕರಣ ದಾಖಲಾಗಿತ್ತು.
ನಂತರ ಸದ್ರಿ ಕಾಣೆಯಾದ ವ್ಯಕ್ತಿಯು ಕೊಲೆಯಾಗಿರಬಹುದೆಂದು ಮನೆಯವರ ಸಂಶಯದ ಆಧಾರದಲ್ಲಿ ಪತ್ತೆಯ ಬಗ್ಗೆ ವಿಶೇಷ ತಂಡವನ್ನು ಪೊಲೀಸ್ ಅಧೀಕ್ಷಕರು ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರು ದ ಕ ಜಿಲ್ಲೆ ರವರ ನಿರ್ದೇಶನದಂತ ಪತ್ತೆಗೆ ಪೊಲೀಸ್
ಉಪಾಧೀಕ್ಷಕರಾದ ಡಾ|| ಗಾನ. ಪಿ. ಕುಮಾರ್ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಮತ್ತು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಉದಯ ರವಿ ಎಂ ವೈ ರವರುಗಳು ವಿಶೇಷ ತಂಡ ರಚಿಸಿ
ಅದರಂತೆ ಸದ್ರಿ ವಿಶೇಷ ತಂಡದ ಅಧಿಕಾರಿ ಮತ್ತು ಸಿಬ್ಬಂಧಿಗಳು ಕ್ಲಿಷ್ಟಕರವಾದ ಈ ಪ್ರಕರಣ ಪತ್ತೆ ಹಚ್ಚುವಲ್ಲಿ ಹಲವು ಅಯಾಮಗಳಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಕೊಲೆಯಾದ ಜಗದೀಶ ರವರು ಅವರ ಜಮೀನು ನೋಡಲು ಬರುವ ಸಮಯದಲ್ಲಿ ಕೊಲೆ ಮಾಡುವ ಬಗ್ಗೆ ಸುಮಾರು
10 ದಿನಗಳ ಹಿಂದೆ ತಿಂಗಳಾಡಿಯ ಉಮೇಶ್ ರೈ ಕೊಲೆ ಪ್ರಕರಣದ ಆರೋಪಿ ಜಯರಾಜ್ ಶೆಟ್ಟಿ ಅನಿಲ್ ಎಂಬಾತನು ಜೊತ ಸೇರಿ ಬಾಲಕೃಷ್ಣ, ಪ್ರಶಾಂತ, ಜೀವನ್ ಪ್ರಸಾದ್ ಮತ್ತು ಜಯಲಕ್ಷ್ಮಿ ಎಂಬವರು ಸೇರಿಕೊಂಡು ಸಂಚು ರೂಪಿಸಿಕೊಂಡು ಕೊಲೆ ಮಾಡುವುದಾಗಿ ತಿರ್ಮಾನಿಸಿ ಜಗದೀಶ ರವರು ತನ್ನ ಜಮೀನನ್ನು ನೋಡಲು ಮತ್ತು ಪಡುವನ್ನೂರು ಗ್ರಾಮದ ಪಟ್ಲಡ್ಕದ ಜಮೀನಿನ
ನೋಂದಣಿ ಮಾಡುವ ವಿಚಾರದಲ್ಲಿ ಮಾತನಾಡುವ ಬಗ್ಗೆ ನ.18 ರಂದು ಬರುವುದಾಗಿ ತಿಳಿಸಿದ್ದು ಆ ದಿನವೇ ಜಗದೀಶರನ್ನು ಕೊಲೆ ಮಾಡಿ ಯಾರಿಗೂ ತಿಳಿಯದ ರೀತಿಯಲ್ಲಿ ಮೃತ ದೇಹವನ್ನು ಮಣ್ಣಿನಲ್ಲಿ ಹೂತು ಹಾಕಿ ನಾಶ ಮಾಡುವ ಬಗ್ಗೆ ಆರೋಪಿಗಳಲ್ಲರೂ ತೀರ್ಮಾನಿಸಿಕೊಂಡು ಅದರಂತೆ ನ.18 ರಂದು ಬೆಳಗ್ಗಿನ ಜಾವ ಮೈಸೂರಿನಿಂದ ಜಗದೀಶನು ಬಸ್ಸಿನಲ್ಲಿ ಹೊರಟು 11.00 ಗಂಟೆ ಸುಮಾರಿಗೆ ಸಂಪ್ಯ ಕ್ಕೆ ಬಂದಿಳಿದವರನ್ನು ಬಾಲಕೃಷ್ಣ ರೈ ಆಟೋ ರಿಕ್ಷಾದಲ್ಲಿ ಆರ್ಯಾಪು ಗ್ರಾಮದ ಮೇಗಿನಪಂಜ ಎಂಬಲ್ಲಿಯ ಜಮೀನಿಗೆ ಕರೆದುಕೊಂಡು ಹೋಗಿ ಅಲ್ಲಿಂದ ಪುತ್ತೂರಿಗೆ ಬಂದು ಪುತ್ತೂರಿನಿಂದ ಜೊತೆಯಾಗಿ ಬಸ್ಸಿನಲ್ಲಿ ಕಾವು ಎಂಬಲ್ಲಿ ಬಂದಿಳಿದು ಅಲ್ಲಿಂದ ಸ್ವಲ್ಪ ದೂರಕ್ಕೆ ಈಶ್ವರಮಂಗಳ ರಸ್ತೆ ಕಡೆಗೆ ನಡೆದುಕೊಂಡು ಹೋದಾಗ ಈ ಮೊದಲು ತೀರ್ಮಾನಿಸಿದಂತೆ ಆರೋಪಿ ಪ್ರಶಾಂತ ಮತ್ತು ಜೀವನ್ ಪ್ರಸಾದ್ ಎಂಬವರು ಕಾರಿನಲ್ಲಿ ಬಂದಿದ್ದವರು ಜಗದೀಶ ರವರನ್ನು ಕಾರಿನಲ್ಲಿ ಕೂರಿಕೊಂಡು ಅಪಹರಣ ಮಾಡಿಕೊಂಡು ನೂಜಿ ಜೈಲು ಪೆರ್ನಾಜೆ ರಸ್ತೆಯಲ್ಲಿ
ಸುಮಾರು 4 ಕಿ ಮೀ ದೂರ ಹೋಗಿ ಅಲ್ಲಿಂದ ಕಾರನ್ನು ತಿರುಗಿಸಿಕೊಂಡು ವಾಪಸ್ಸು ಬರುತ್ತಾ ಜೀವನ್ ಪ್ರಸಾದನು ಜಗದೀಶ ರವರನ್ನು ಹಿಡಿದುಕೊಂಡು ತಲೆಯನ್ನು ಬಗ್ಗಿಸಿದಾಗ ಎದುರು ಸೀಟಿನಲ್ಲಿ ಕುಳಿತಿದ್ದ ಬಾಲಕೃಷ್ಣ ರೈ ಈಗಾಗಲೇ ಕಾರಿನಲ್ಲಿ ತಂದಿದ್ದ ಸುತ್ತಿಗೆಯಲ್ಲಿ ಜಗದೀಶ ರವರ ತಲೆಗೆ ಬಲವಾಗಿ ಹೊಡೆದ ಸಮಯ ಜಗದೀಶ ರವರು ಪ್ರಜ್ಞೆ ತಪ್ಪಿದ್ದು ಆ ಸಮಯ ಹಿಂದಿನಿಂದ ಯಾವುದೋ
ವಾಹನ ಬರುವುತ್ತಿರುವುದನ್ನು ಗಮನಿಸಿದ ಆರೋಪಿಗಳು ಕಾರನ್ನು ವೇಗವಾಗಿ ಚಲಾಯಿಸಿಕೊಂಡು ಪಡುವನ್ನೂರು ಗ್ರಾಮ ಪಟ್ಲಡ್ಕದ ಮೂನಡ್ಕ ತೋಟದಲ್ಲಿನ ಕಟ್ಟಡದ ಬಳಿಗೆ ಹೋಗಿ ಆ ಸಮಯ ಜಗದೀಶ ರವರು ಉಸಿರಾಡಿಕೊಂಡು ಜೀವಂತವಾಗಿರುವುದನ್ನು ಗಮನಿಸಿದ ಆರೋಪಿಗಳು
ಮತ್ತೆ ತಮ್ಮಲ್ಲಿದ್ದ ಚಾಕುವಿನಿಂದ ಕುತ್ತಿಗೆಗೆ ಮತ್ತು ಬೆನ್ನಿಗೆ ತಿವಿದು ಕೊಲೆ ಮಾಡಿ ನಂತರ ಮೃತ ದೇಹವನ್ನು ಪಡುವನ್ನೂರು ಗ್ರಾಮದ ಮುಗುಳಿ ಎಂಬಲ್ಲಿಯ ಅರಣ್ಯ ಇಲಾಖೆಗೆ ಸಂಭಂದಿಸಿದ ಆಕೇಶಿಯಾ ನೆಡು ತೋಪಿನ ಗುಡ್ಡದಲ್ಲಿ ಹೊಂಡ ತೆಗೆದು ಜಗದೀಶ ರವರ ಮೃತ ದೇಹವನ್ನು ಹೂತು ಹಾಕಿದ್ದಾರೆ.
ಕೊಲೆ ಮಾಡಿದ ನಂತರ ಸಾಕ್ಷಿ ನಾಶ ಮಾಡಲು ಜಗದೀಶ್ ಬಳಸುತ್ತಿದ್ದ ಮೊಬೈಲ್ ನ್ನು ರಾತ್ರೋ ರಾತ್ರಿ ಮೈಸೂರಿಗೆ ಹೋಗಿ ಮೈಸೂರಿನ ಹೂಟಗಲ್ಲಿಯಲ್ಲಿ ಬಿಸಾಡಿ, ನಂತರ ಹತ್ಯೆಗೆ ಬಳಸಿದ ಸುತ್ತಿಗೆ ಮತ್ತು ಚಾಕುವನ್ನು ಕುಶಾಲನಗರ ಶುಂಠಿ ಕೊಪ್ಪ ರಸ್ತೆಯ ಬದಿಯಲ್ಲಿ ಬಿಸಾಡಿದ್ದಾರೆ.
ಈ ಕೊಲೆಗೆ ಜಗದೀಶ ರವರು ಮತ್ತು ಬಾಲಕೃಷ್ಣ ಹತ್ತಿರದ ಸಂಬಂಧಿಗಳಾಗಿದ್ದು ಜಗದೀಶ ರವರ ಪುತ್ತೂರಿನ ಜಮೀನು ಎಲ್ಲಾ ವ್ಯಹಾರಗಳನ್ನು ಆರೋಪಿ ಬಾಲಕೃಷ್ಣ ರೈ ನೋಡಿಕೊಂಡು ಜಗದೀಶ ರವರೊಂದಿಗೆ ತುಂಬಾ ಆತ್ಮೀಯರಾಗಿದ್ದುಕೊಂಡು ಅವರಿಗೆ ತಿಳಿಯದಂತೆ ಪುತ್ತೂರು ತಾಲೂಕು ಪಡುವನ್ನೂರು ಗ್ರಾಮದ ಪಟ್ಲಡ್ಕ ಎಂಬಲ್ಲಿಯ ಜಮೀನನ್ನು ತನ್ನ ಹೆಸರಿನಲ್ಲಿ ಮಾಡಿಕೊಂಡು ಬರೋಬ್ಬರಿಗೆ ಮಾರಾಟ ಮಾಡಿದ್ದು, ಮುಂದಕ್ಕೆ ಜಾಗವನ್ನು
ಖರೀದಿಸಿದವರು ಕೃಷಿ ಚಟುವಟಿಕೆ ಮಾಡಿಕೊಂಡಿದ್ದು ಈ ವಿಚಾರ ಜಗದೀಶನಿಗೆ ತಿಳಿದರೆ ಮುಂದಕ್ಕೆ ಸಮಸ್ಯೆಯಾಗಬಹುದೆಂದು ಹಾಗೂ ಜಗದೀಶ್ ಜೀವಂತವಾಗಿದ್ದರೇ ತೊಂದರೆಯಾಗಬಹುದೆಂದು ಭಾವಿಸಿ ಜಗದೀಶ ರನ್ನು ಕೊಲೆ ಮಾಡಬೇಕೆಂದು ತೀರ್ಮಾನಿಸಿ ಈ ಹಿಂದೆ ತಿಂಗಳಾಡಿಯ ಉಮೇಶ್ ರೈ ಕೊಲೆ ಪ್ರಕರಣದ ಆರೋಪಿ ರೌಡಿ ಶೀಟರ್ ಜಯರಾಜ್ ಶೆಟ್ಟಿ ಅನಿಲ್ ಎಂಬಾತನ ಮಾರ್ಗದರ್ಶನದಲ್ಲಿ ಸಂಚು ರೂಪಿಸಿಕೊಂಡು ಬಾಲಕೃಷ್ಣರೈ ಮಗ ಪ್ರಶಾಂತ್ ಪತ್ನಿ, ಜಯಲಕ್ಷ್ಮಿ ಮತ್ತು ನೆರೆ ಮನೆ ನಿವಾಸಿ ಜೀವನ್ ಪ್ರಸಾದ್ ರೊಂದಿಗೆ ಸೇರಿಕೊಂಡು ಕೊಲೆ ಮಾಡಿರುವುದಾಗಿ ಆರೋಪಿಗಳನ್ನು ಸತ್ಯಾಂಶವನ್ನು ಒಪ್ಪಿಕೊಂಡಿದ್ದಾರೆ.
ಆರೋಪಿಗಳು ಈ ಕೃತ್ಯಕ್ಕೆ ಬಳಸಿದ ಮಾರುತಿ ಕಾರು ಹಾಗೂ ಸುತ್ತಿಗೆ, ಚಾಕುವನ್ನು ಮತ್ತು ಮೃತರ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀನ ಪಡಿಸಿ ಕೊಂಡ ಸೊತ್ತುಗಳ ಅಂದಾಜು ಮೌಲ್ಯ ಸುಮಾರು 6,00,000/- ರೂ. ಆಗಿರಬಹುದಾಗಿದೆ.
ಜಿಲ್ಲೆಯನ್ನೇ ಬೆಚ್ಚಿ ಬೀಳಿಸಿದ ಪ್ರಕರಣವನ್ನು ಭೇಧಿಸುವಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಋಷಿಕೇಶ ಭಗವಾನ್ ಸೋನಾವನೆ, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಡಾ. ಶಿವ ಕುಮಾರ್, ರವರ ಮಾರ್ಗದರ್ಶನದಂತೆ ಪೊಲೀಸ್ ಉಪಾಧೀಕ್ಷಕರಾದ ಡಾ.ಗಾನ, ಪಿ. ಕುಮಾರ್ ನೇತೃತ್ವದಲ್ಲಿ ಪುತ್ತೂರು ಗ್ರಾಮಾಂತರ ವೃತ್ತದ ಪೊಲೀಸ್ ವೃತ್ತ ನಿರೀಕ್ಷಕರಾದ ಉಮೇಶ್ ಉಪ್ಪಳಿಕೆ ಮತ್ತು ಪುತ್ತೂರು ಗ್ರಾಮಾಂತರ ಠಾಣೆಯ ಪೊಲೀಸ್ ಉಪನಿರೀಕ್ಷಕರಾದ ಉದಯ ರವಿ ಎಂ ವೈ ಮತ್ತು ಅಪರಾಧ ವಿಭಾಗದ ಪೊಲೀಸ್ ಉಪನಿರೀಕ್ಷಕರಾದ ಅಮೀನ್ ಸಾಬ್ ಅತ್ತಾರ್, ಪ್ರೋ ಪಿಎಸ್‌ಐ ಶ್ರೀಕಾಂತ ರಾಥೋಡ್ ರವರು ಮತ್ತು ಸಿಬ್ಬಂದಿಗಳಾದ ಎ ಎಸ್ ಐ ಜಗನ್ನಾಥ್, ಶಿವರಾಮ ಹೆಚ್, ಧರ್ಣಪ್ಪ ಗೌಡ, ಸಲೀಂ, ದೇವರಾಜ್, ಅದ್ರಾಮ್, ಸ್ಕರಿಯ, ಪ್ರಶಾಂತ್ ರೈ, ಪ್ರವೀಣ್ ರೈ ಪಾಲ್ತಾಡಿ, ಪ್ರಶಾಂತ, ಕೃಷ್ಣಪ್ಪ ಗೌಡ, ಲಕ್ಷ್ಮೀಶ ಗೌಡ, ಜಗದೀಶ ಅತ್ತಾಜೆ, ಹರ್ಷಿತ, ಲೋಕೇಶ, ಗಿರೀಶ ರೈ, ಮುನಿಯ ನಾಯ್ಕ, ಗುಡದಪ್ಪ ತೋಟದ್,ಮಪಿಸಿ ಧನ್ಯಶ್ರೀ, ಗಾಯತ್ರಿ, ಜಿಲ್ಲಾ ಗಣಕ ಯಂತ್ರದ ಸಂಪತ್, ದಿವಾಕರ್, ಹಾಗೂ ಚಾಲಕರಾದ ಹರೀಶ ನಾಯ್ಕ, ನವಾಝ್ ಬುಡ್ಡಿ, ಮತ್ತು ವಿನೋದ್ ಪಾಲ್ಗೊಂಡಿದ್ದರು.
ಕ್ಲಿಷ್ಟಕರವಾದ ಪ್ರಕರಣವನ್ನು ಕೇವಲ ಒಂದೇ ವಾರದಲ್ಲಿ ಭೇದಿಸುವಲ್ಲಿ ಸಫಲರಾದ ಈ ತಂಡಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕರು ಸೂಕ್ತ ಬಹುಮಾನವನ್ನು ಘೋಷಿಸಿದ್ದಾರೆ.