ಪುತ್ತೂರಿನ ನರೇಂದ್ರ ಪದವಿ ಪೂರ್ವ ಕಾಲೇಜಿನ 17 ಬಡ ವಿದ್ಯಾರ್ಥಿಗಳಿಗೆ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್ – 190 ವತಿಯಿಂದ ವಿದ್ಯಾರ್ಥಿ ವೇತನವನ್ನು ಡಿ.02 ರಂದು ವಿತರಿಸಲಾಯಿತು.
ಎಂಸಿಆರ್‌ಟಿ – 190ಯ ಚೇರ್‌ಮೆನ್ ಸಂತೋಷ್ ಕಾಮತ್, ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ ಹಾಗೂ ಖಜಾಂಚಿ ಸುಧನ್ವ ಆಚಾರ್ಯ 85,000/- ರೂ. ಮೌಲ್ಯದ ಚೆಕ್‌ನ್ನು ವಿವೇಕಾನಂದ ವಿದ್ಯಾವರ್ಧಕ ಸಂಘದ ಜೊತೆ ಕಾರ್ಯದರ್ಶಿಯಾದ ರೂಪಲೇಖ ರವರಿಗೆ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ನರೇಂದ್ರ ಪದವಿ ಪೂರ್ವ ಕಾಲೇಜಿನ ಅಧ್ಯಕ್ಷರಾದ ಶ್ರೀಕಾಂತ್ ಕೊಳತ್ತಾಯ, ಸಂಚಾಲಕರಾದ ಸಂತೋಷ್ ಬೋನಂತಾಯ, ಪ್ರಾಂಶುಪಾಲರಾದ ಪ್ರಸಾದ್ ಶ್ಯಾನ್‌ಭೋಗ್, ಆಡಳಿತ ಮಂಡಳಿಯ ಸದಸ್ಯರಾದ ಸೂರ್ಯನಾಥ ಆಳ್ವ ಮತ್ತು ಪ್ರಸನ್ನ ಕುಮಾರ್ ಉಪಸ್ಥಿತರಿದ್ದರು.