ಕಡಬ: ಪೇಟೆಯಲ್ಲಿರುವ ಪಾಳುಬಿದ್ದ ಪ್ರವಾಸಿ ಬಂಗಲೆಯಲ್ಲಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ವ್ಯಕ್ತಿಯೋರ್ವರ ಮೃತದೇಹ ಪತ್ತೆಯಾಗಿದೆ.
ಮೃತಪಟ್ಟವರನ್ನು ಉಳಿಪ್ಪು ನಿವಾಸಿ ಮೋನಚ್ಚನ್ ಎಂದು ಗುರುತಿಸಲಾಗಿದೆ.
ಕಡಬ ಪೇಟೆಯಲ್ಲಿ ಸುತ್ತಾಡುತ್ತಿದ್ದ ಈ ವ್ಯಕ್ತಿ ಪೇಟೆಗೆ ಬರುವ ಜನರಲ್ಲಿ ಹಣ ಕೇಳುತ್ತಿದ್ದು, ಕುಡಿತದ ಚಟ ಹೊಂದಿರುವ ಇವರು ಮನೆಗೆ ಹೆಚ್ಚಾಗಿ ಹೋಗುತ್ತಿರಲಿಲ್ಲ ಎನ್ನಲಾಗಿದೆ.
ಇದೀಗ ಕಡಬದ ಮುಖ್ಯ ಪೇಟೆಯಲ್ಲಿರುವ ಪಾಳುಬಿದ್ದ ಪ್ರವಾಸಿ ಬಂಗಲೆಯಲ್ಲಿ ಈತನ ಮೃತದೇಹ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದೆ. ಕಡಬ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹೆಚ್ಚಿನ ಮಾಹಿತಿ ತನಿಖೆಯ ಬಳಿಕವಷ್ಟೇ ತಿಳಿದು ಬರಬೇಕಿದೆ.