ಮಂಗಳೂರು: ಚಲಿಸುತ್ತಿದ್ದ ಆಟೋ ರಿಕ್ಷಾವೊಂದರ ಚಾಲಕ ಚಾಲನೆ ವೇಳೆಯೇ ಹೃದಯಾಘಾತದಿಂದ ಮೃತಪಟ್ಟ ಘಟನೆ ಇಂದು ನೇತ್ರಾವತಿ ಸೇತುವೆಯಲ್ಲಿ ನಡೆದಿದೆ.
ಮೃತರನ್ನ ಚೊಕ್ಕಬೆಟ್ಟು ನಿವಾಸಿ ಮುಹಮ್ಮದ್ ಹನೀಫ್ (46) ಎಂದು ಗುರುತಿಸಲಾಗಿದೆ.
ನಗರದಿಂದ ತೊಕ್ಕೊಟ್ಟು ಕಡೆಗೆ ರಿಕ್ಷಾ ಚಲಾಯಿಸಿ ಕಲ್ಲಾಪುವಿನಲ್ಲಿರುವ ಗ್ಲೋಬಲ್ ಮಾರುಕಟ್ಟೆಗೆ ತರಕಾರಿ ಖರೀದಿಸಲು ವ್ಯಾಪಾರಿಯೋರ್ವರನ್ನು ಆಟೋ ರಿಕ್ಷಾದಲ್ಲಿ ಕರೆದೊಯ್ಯುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.
ಆಟೋ ರಿಕ್ಷಾ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಪ್ಪಿನಮೊಗರು ತಲುಪಿದಾಗ ಚಾಲಕ ಹನೀಫ್ ರಿಗೆ ಕಣ್ಣು ಮಂಜದಂತಾಗಿದ್ದು, ರಿಕ್ಷಾ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.
ಈ ವೇಳೆ ಸಾರ್ವಜನಿಕರು ಹನೀಫ್ ರನ್ನು ಆರೈಕೆ ಮಾಡಿದ್ದರು. ಬಳಿಕ ಸುಧಾರಿಸಿಕೊಂಡು ಅವರು ರಿಕ್ಷಾ ಚಲಾಯಿಸಿಕೊಂಡು ಅಲ್ಲಿಂದ ಸ್ವಲ್ಪ ಮುಂದಕ್ಕೆ ಹೋದರೂ ನೇತ್ರಾವತಿ ಸೇತುವೆ ತಲುಪಿದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಈ ಬಗ್ಗೆ ಕಂಕನಾಡಿ ನಗರ ಠಾಣೆಗೆ ದೂರು ನೀಡಲಾಗಿದೆ ಎಂದು ತಿಳಿದು ಬಂದಿದೆ.