ಪುತ್ತೂರು : ತಾಲೂಕಿನ ಜನತೆಯ ಪಾಲಿಗೆ ಇದೀಗ ಸಂತಸದ ಸಂಗತಿ. ಇನ್ನು ಮುಂದೆ ಆರೋಗ್ಯ ಸಂಬಂಧಿತ ತುರ್ತು ಚಿಕಿತ್ಸಾ ಸೌಲಭ್ಯಕ್ಕಾಗಿ ಬೇರೆಲ್ಲೋ ಅಲೆದಾಡುವ ಪ್ರಮೇಯವೇ ಇಲ್ಲ. ಇದೇ ಕೊರಗನ್ನು ನೀಗಿಸಲು ಡಾ. ಶ್ರೀಪತಿ ರಾವ್ ಮತ್ತು ಡಾ ಸುಧಾ ಎಸ್ ರಾವ್ ನೇತೃತ್ವದ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ತನ್ನ 18ನೇ ವರ್ಷದ ಘಟ್ಟದಲ್ಲಿ ಇದೀಗ ಮತ್ತೊಂದು ವಿನೂತನ ಹೆಜ್ಜೆಯನ್ನು ಇಡುತ್ತಿದೆ.ಪುತ್ತೂರಿನ ಬೊಳುವಾರಿನಲ್ಲಿರುವ ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆ ಇದೀಗ ಮಂಗಳೂರಿನ ಕೆಎಂಸಿ ಆಸ್ಪತ್ರೆಯ ತುರ್ತು ನಿಗಾ ವಿಭಾಗದೊಂದಿಗೆ ಮಾಡಿಕೊಂಡಿರುವ ಒಪ್ಪಂದದಂತೆ ಸರ್ವ ಸುಸಜ್ಜಿತ ಪ್ರಗತಿ ತುರ್ತು ನಿಗಾ ವೈದ್ಯಕೀಯ ಸೇವೆಯನ್ನು ಆರಂಭಿಸಿದೆ.
ಈ ನೂತನ ಸೇವಾ ಘಟಕದ ಉದ್ಘಾಟನೆಯನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಸಂಜೀವ ಮಠಂದೂರು ನಡೆಸಲಿದ್ದು, ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್, ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕರಾದ ಡಾ ಯು ಪಿ ಶಿವಾನಂದ, ರೋಟರಿ ಜಿಲ್ಲಾ ಗವರ್ನರ್ ಎಂ ರಂಗನಾಥ್ ಭಟ್, ಕೆಎಂಸಿ ಆಸ್ಪತ್ರೆ ಮಂಗಳೂರು ಇಲ್ಲಿನ ವೈದ್ಯಕೀಯ ಸೇವೆಗಳ ಪ್ರಾದೇಶಿಕ ಮುಖ್ಯಸ್ಥ ಡಾ ಆನಂದ ವೇಣುಗೋಪಾಲ್, ಸಿಒಒ ಸಗೀರ್ ಸಿದ್ದಿಕ್, ಪ್ರಗತಿ ಸ್ಪೆಶಾಲಿಟಿ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ ಶ್ರೀಪತಿ ರಾವ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ…
‘ಪ್ರಗತಿ’ ಪಥ : 2004ರ ಫೆ. 9ರಂದು ಪುತ್ತೂರಿನ ಬೊಳುವಾರಿನಲ್ಲಿ ಆರಂಭಗೊಂಡ ಈ ಆಸ್ಪತ್ರೆ ಇದೀಗ ತುಂಬು ಹರೆಯದ ಸಡಗರದಲ್ಲಿದೆ. ಪುತ್ತೂರು ಪರಿಸರದಲ್ಲಿ ವೈದ್ಯಕೀಯ ಅಂತ ಬಂದಾಗ ತನ್ನದೇ ಆದ ರೀತಿಯಲ್ಲಿ ತೊಡಗಿಸಿಕೊಂಡು ಜನಾಭಿಮುಖವಾಗಿ ತೆರೆದುಕೊಂಡು ಕಾರ್ಯಾಚರಿಸುತ್ತಿದ್ದ ಆಸ್ಪತ್ರೆಗೆ ಇದೀಗ 18ರ ಹರೆಯದ ಹೊಸ್ತಿಲು. ಆಸ್ಪತ್ರೆಯ ಗುಣಮಟ್ಟದ ನಿಯಂತ್ರಣ ಮಂಡಳಿಯಾಗಿರುವ ಪ್ರತಿಷ್ಠಿತ ಎನ್ ಎ ಬಿ ಹೆಚ್ ಪ್ರತೀ ಮೂರು ವರ್ಷಗಳಿಗೊಮ್ಮೆ ನೀಡುವ ಮಾನ್ಯತೆಯನ್ನು 2017ರಲ್ಲಿಯೇ ಪಡೆದುಕೊಳ್ಳುವ ಮೂಲಕ ಮನ್ನಣೆಗೆ ಪಾತ್ರವಾದ ಪುತ್ತೂರಿನ ಸರ್ವ ಪ್ರಥಮ ಆಸ್ಪತ್ರೆ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದ್ದು ಇದೀಗ ಮತ್ತೊಮ್ಮೆ ಎರಡನೇ ಬಾರಿಗೆ ಈ ಮಾನ್ಯತೆ ಪಡೆದುಕೊಂಡು ‘ಪ್ರಗತಿ’ ಪಥ ಉನ್ನತ ಸ್ಥಾನಕ್ಕೆ ಏರುತ್ತಿದೆ.ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆಗಳನ್ನು ನೀಡುವುದರ ಜತೆಗೆ ಪುತ್ತೂರು ಪರಿಸರದಲ್ಲಿ ಅರೆ ವೈದ್ಯಕೀಯ ಕ್ಷೇತ್ರಕ್ಕೆ ನುರಿತ ಶುಶ್ರೂಷಕ ಸಿಬ್ಬಂದಿಗಳು ಹಾಗೂ ತಂತ್ರಜ್ಞರ ಸೇವೆಯ ಅಗತ್ಯತೆಯನ್ನು ಮನಗಂಡು ಪ್ರಗತಿ ಪ್ಯಾರಾ ಮೆಡಿಕಲ್ ಸೈನ್ಸ್ ಕಾಲೇಜನ್ನು ಪ್ರಾರಂಭಿಸಿ ಅದರಲ್ಲಿ ಡಿಒಟಿ (ಆಪರೇಷನ್ ಥಿಯೇಟರ್ ಟೆಕ್ನಾಲಜಿ ಕೋರ್ಸ್), ಲ್ಯಾಬ್ ಟೆಕ್ನಾಲಜಿ ಕೋರ್ಸ್ ಗಳನ್ನು ಪ್ರಾರಂಭಿಸಿದ ಹೆಗ್ಗಳಿಕೆಯೂ ‘ಪ್ರಗತಿ’ ಯದ್ದು. ಈ ಕಾಲೇಜಿನಲ್ಲಿ ಇದೀಗ ಮೂರು ವಿವಿಧ ಕೋರ್ಸ್ ಗಳಲ್ಲಿ 120 ವಿದ್ಯಾರ್ಥಿಗಳು ಕಲಿಯುತ್ತಿದ್ದು ಈಗಾಗಲೇ 4 ಬ್ಯಾಚ್ ಗಳಲ್ಲಿ ತರಬೇತಿ ಪಡೆದ ಅರೆ ವೈದ್ಯಕೀಯ ಸಿಬ್ಬಂದಿಗಳು ನಗರದ ವಿವಿಧ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇಲ್ಲಿನ ಪ್ಯಾರಾ ಮೆಡಿಕಲ್ ಕಾಲೇಜಿನ ವಿದ್ಯಾರ್ಥಿನಿ ಕು ದೀಕ್ಷಿತಾ ಡಿಒಟಿಟಿ ಕೋರ್ಸ್ ನಲ್ಲಿ ರಾಜ್ಯಕ್ಕೆ ತೃತೀಯ ರ್ಯಾಂಕ್ ಪಡೆದುಕೊಳ್ಳುವ ಮೂಲಕ ವಿಶೇಷ ಸಾಧನೆ ಮಾಡಿ ಕಾಲೇಜಿಗೆ ಕೀರ್ತಿಯನ್ನೂ ತಂದಿರುತ್ತಾರೆ..
ವೈದ್ಯಕೀಯ ರಂಗದಲ್ಲಿ ಅಮೋಘ ಹೆಜ್ಜೆಯನ್ನಿಡುತ್ತಾ ಸಾಗಿ ಬಂದು ಮತ್ತೂ ಮುಂದುವರಿದ ಭಾಗ ಎನ್ನುವಂತೆ ಇದೀಗ ಜನತೆಯ ಪಾಲಿಗೆ ಜೀವರಕ್ಷಕನಾಗಿ ತನ್ನ ಕಾರ್ಯ ಕ್ಷೇತ್ರವನ್ನು ನವೀಕೃತ ರೂಪದಲ್ಲಿ ವಿಸ್ತರಿಸಿಕೊಳ್ಳುತ್ತಿದೆ.
ಕೆಎಂಸಿ ಮಂಗಳೂರು ಪ್ರಗತಿ ಟೈ ಅಪ್ ಸ್ವರೂಪ ಹೇಗಿದೆ ಅಂತೀರಾ? :. ಕೆ ಎಂ ಸಿ ತುರ್ತು ನಿಗಾ ವಿಭಾಗದ ಇಬ್ಬರು ವೈದ್ಯರು ಪುರ್ಣಾವಧಿ ಸೇವೆಗೆ ಇಲ್ಲೂ ಲಭ್ಯ. ರೋಗಿಗಳ ಅನುಕೂಲಕ್ಕಾಗಿ ವೆಂಟಿಲೇಟರ್ ಸಹಿತ ಆಂಬ್ಯುಲೆನ್ಸ್ ಕೆ ಎಂ ಸಿ ತಜ್ಞ ವೈದ್ಯರಿಂದ ವೀಡಿಯೊ ಕಾನ್ಫರೆನ್ಸ್ ಮೂಲಕ ಬ್ಯಾಕಪ್ ಸರ್ವೀಸ್ ವಿಶೇಷ ತರಬೇತಿ – ಆರೋಗ್ಯ ಸೇವೆ ಲಭ್ಯವಿದೆ. ಹೀಗೆ ನೂತನ ವಿಭಾಗ ಪುತ್ತೂರಿನಲ್ಲಿ ಕಾರ್ಯನಿರ್ವಹಿಸಲಿದೆ.