ಮಂಗಳೂರು: ವಿದ್ಯಾರ್ಥಿ ತಂಡದ ನಡುವೆ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಪಾಂಡೇಶ್ವರ ಠಾಣೆ ಪೊಲೀಸರು 8 ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ವಿದ್ಯಾರ್ಥಿಗಳನ್ನು ಮೊಹಮ್ಮದ್, ವಿಮಲ್, ಫಹಾದ್ ಮುನಾಫ್, ಶಾಹೀದ್, ಕಾನೆ ಜಾನ್ಸನ್, ಆದರ್ಶ್, ಮೊಹಮ್ಮದ್ ನಾಸೀಫ್, ತಾಹೀರ್ ಎನ್ನಲಾಗಿದೆ. 8 ಮಂದಿಯ ಪೈಕಿ ನಾಲ್ವರು ಡ್ರಗ್ಸ್ ಸೇವಿಸಿರುವುದು ದೃಢಪಟ್ಟಿದೆ ಎನ್ನಲಾಗಿದೆ.
ನಗರದ ಗುಜ್ಜರಕೆರೆ ಪ್ರದೇಶದಲ್ಲಿ ಪದವಿ ಕಾಲೇಜಿನ ಹಾಸ್ಟೆಲ್‌ನಲ್ಲಿ ವಾಸವಿದ್ದ ವಿದ್ಯಾರ್ಥಿಗಳ ಎರಡು ತಂಡಗಳ ನಡುವೆ ಡಿ.2 ರಂದು ಘರ್ಷಣೆ ನಡೆದಿದೆ.
ಪ್ರಕರಣದ ಸಂಬಂಧ ಯೇನಪೋಯ ಹಾಸ್ಟೆಲ್‌ಗೆ ಮಂಗಳೂರು ಎಸ್‌ಪಿ ಶಶಿಕುಮಾರ್ ಭೇಟಿ ನೀಡಿದ್ದು, ಈ ಸಂದರ್ಭ ಘಟನೆಯ ಬಗ್ಗೆ ಅವರಿಗೆ ತಿಳಿಸಿದ್ದು, ಕೂಡಲೇ ಹಾಸ್ಟೆಲ್ ಅನ್ನು ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತ 2 ವಿದ್ಯಾರ್ಥಿ ಗುಂಪಿನವರೂ ದೂರು, ಪ್ರತಿದೂರು ನೀಡಿದ್ದು, ಪ್ರಕರಣದ ಸಂಬಂಧ 9 ವಿದ್ಯಾರ್ಥಿಗಳನ್ನು ಪಾಂಡೇಶ್ವರ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ವಶಕ್ಕೆ ಪಡೆದುಕೊಂಡ 8 ಮಂದಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಈ ಪೈಕಿ 4 ಮಂದಿ ಗಾಂಜಾ ಸೇವನೆ ಮಾಡಿದ್ದಾರೆ ಎನ್ನುವುದು ದೃಢಪಟ್ಟಿದೆ.