ಸುಳ್ಯ: ಪಿಕಪ್ ವಾಹನಕ್ಕೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರನ ಗಾಯಗೊಂಡ ಘಟನೆ ಅರಂತೋಡು ಕೊಡಂಕೇರಿ ತಿರುವಿನಲ್ಲಿ ನಡೆದಿದೆ.
ಅರಂತೋಡು ಕೊಡಂಕೇರಿ ತಿರುವಿನಲ್ಲಿ ಸುಳ್ಯ ದಿಂದ ಅರಂತೋಡಿಗೆ ಬರುತ್ತಿದ್ದ ಪಿಕಪ್ ವಾಹನಕ್ಕೆ ಮಡಿಕೇರಿನಿಂದ ಬದಿಯಡ್ಕ ತೆರಳುತ್ತಿದ್ದ ಬೈಕ್ ಪರಸ್ಪರ ಡಿಕ್ಕಿಯಾಗಿ ಸವಾರನ ಕಾಲಿಗೆ ಗಾಯವಾಗಿದೆ ಎನ್ನಲಾಗಿದೆ.
ಗಾಯಾಳುವನ್ನು ಸುಳ್ಯ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಪಡೆಯತ್ತಿದ್ದಾರೆ. ಘಟನಾ ಸ್ಥಳಕ್ಕೆ ಕಲ್ಲುಗುಂಡಿ ಹೊರ ಠಾಣಾ ಪೊಲೀಸರು ತನಿಖೆ ಭೇಟಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.