ಪುತ್ತೂರು: ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರಾಗಿ ಮೌಲಾನ ಶಾಫಿ ಸಅದಿ ಆಯ್ಕೆ ವಿಚಾರ ಭಾರೀ ಸದ್ದು ಮಾಡಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪರ ವಿರೋಧ ಚರ್ಚೆಗಳು ನಡೆದಿದ್ದು, ಇಂದು ಕರ್ನಾಟಕ ಮುಸ್ಲಿಂ ಜಮಾಅತ್ ಪುತ್ತೂರು ತಾಲೂಕು ಸಮಿತಿ ವತಿಯಿಂದ ಆಯೋಜಿಸಿದ್ದ ಪೌರ ಸನ್ಮಾನ ಹಾಗೂ ಜಮಾಅತ್ ಅಧಿವೇಶನ ಭಾಗವಹಿಸಿದ್ದ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷ ಮೌಲಾನ ಶಾಫಿ ಸಅದಿ ರವರಲ್ಲಿ ಈ ಸಾಮಾಜಿಕ ಜಾಲತಾಣಗಳ ಚರ್ಚೆ ಬಗ್ಗೆ ಪ್ರಶ್ನಿಸಿದಾಗ ಸ್ಪಂದಿಸಲು ನಿರಾಕರಿಸಿದರು.
‘ಸಾಮಾಜಿಕ ಜಾಲತಾಣಗಳ ವಿಷಯ ಬಿಡಿ ಅಭಿವೃದ್ಧಿ ಕಡೆ ನೋಡಿ’.. ಎನ್ನುತ್ತಾ ತಮ್ಮ ಬಗ್ಗೆ ಸಾಮಾಜಿಕಜಾಲತಾಣಗಳಲ್ಲಿ ಆಗುತ್ತಿರುವ ಚರ್ಚೆಗಳ ಬಗ್ಗೆ ಉತ್ತರಿಸಲು ನಿರಾಕರಿಸಿದರು.
ನಮ್ಮ ಪ್ರಥಮ ಆದ್ಯತೆನೇ ರಾಜ್ಯದಲ್ಲಿರುವ ವಕ್ಫ್ ಆಸ್ತಿಗಳನ್ನು ಸಂರಕ್ಷಣೆ ಮಾಡುವುದು, ಹಾಗೇ ಸಂರಕ್ಷಣೆ ಮಾಡಿದ ಜಾಗದಲ್ಲಿ ನಮ್ಮ ಸಮುದಾಯದಲ್ಲಿ ತುಳಿತ್ತಕ್ಕೊಳಗಾದ, ಬಡತನದಲ್ಲಿರುವ ನಮ್ಮ ಮಕ್ಕಳನ್ನು ಶೈಕ್ಷಣಿಕವಾಗಿ ಅಭಿವೃದ್ಧಿ ಪಡಿಸುವುದು ನಮ್ಮ ಮೊದಲ ಆದ್ಯತೆಯಾಗಿದೇ ಎಂದರು.
ವಕ್ಫ್ ಬೋರ್ಡ್ ಸ್ಥಾಪನೆಯಾದಗಿನಿಂದಲೇ ಗೊಂದಲಗಳು ಪ್ರಾರಂಭವಾಗಿದೆ. ಎಷ್ಟು ಗೊಂದಲಗಳು ಸರಿಯಿದೆ, ಎಷ್ಟು ತಪ್ಪಿದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ನಮ್ಮ ಒಂದು ಗುರಿಯಿದೆ ವಕ್ಫ್ ಬೋರ್ಡ್ ಅನ್ನು ಬದಲಾವಣೆ ಮಾಡಿ ನಮ್ಮ ಸಮುದಾಯದಕ್ಕೆ ಸಿಗಬೇಕದಂತಹ ಸವಲತ್ತುಗಳನ್ನು ಕೊಡಿಸುವಲ್ಲಿ ಗರಿಷ್ಠ ಪ್ರಯತ್ನ ಮಾಡುತ್ತೇವೆ ಅದಕ್ಕೆ ರಾಜ್ಯ ಸರಕಾರ ಸಂಪೂರ್ಣ ಬೆಂಬಲವಿದೆ, ವಕ್ಫ್ ಬೋರ್ಡ್ ನ ಸದಸ್ಯರ ಮತ್ತು ವಿರೋಧ ಪಕ್ಷದವರ ಬೆಂಬಲವೂ ಇದೆ ಎಂದರು.
ಆದರೇ ಸಾಮಾಜಿಕ ಜಾಲತಾಣಗಳಲ್ಲಿನ ಚರ್ಚೆಗಳ ಬಗ್ಗೆ ಪ್ರಶ್ನಿಸಿದಾಗ ಉತ್ತರಿಸಲು ನಿರಾಕರಿಸಿದರು..