ಉಪ್ಪಿನಂಗಡಿ: ಮುಸುಕು ಧರಿಸಿಕೊಂಡು ಬಂದ ತಂಡವೊಂದು ಅಂಗಡಿ ಬಳಿ ನಿಂತಿದ್ದ ಹಿಂದೂ ಯುವಕರಿಗೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಡಿ.6 ರಂದು ಉಪ್ಪಿನಂಗಡಿಯ ಹಳೆಗೇಟು ಬಳಿ ನಡೆದಿದೆ.
ಮೀನು ಅಂಗಡಿಯ ಮಾಲಕರಾದಂತಹ ಮೋಹನ್ ಶೆಟ್ಟಿ, ಅಶೋಕ್ ಶೆಟ್ಟಿ ರವರಿಗೆ ಮತ್ತು ಮೀನು ಖರೀದಿಸುತ್ತಿದ್ದ ಮಹೇಶ್ ರವರಿಗೆ 5 ಬೈಕ್ ಮತ್ತು 2 ಕಾರ್ ನಲ್ಲಿ ಮಾಸ್ಕ್ ಧರಿಸಿಕೊಂಡು ಬಂದ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ಹಲ್ಲೆ ನಡೆಸಿದ ನಂತರ ಮುಸುಕಧಾರಿಗಳ ತಂಡ ಪರಾರಿಯಾಗಿದ್ದು, ಗಾಯಗೊಂಡ ಮೂವರು ಯುವಕರು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು, ಓರ್ವನ ಕೈಗೆ ಗಂಭೀರ ಗಾಯವಾಗಿದೆ ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬೇಕಿದೆ.