ಪುತ್ತೂರು: ತಾಲೂಕಿನ ಮಾಜಿ ಶಾಸಕ, ಬಿಜೆಪಿ ಭೀಷ್ಮ ರಾಮ್ ಭಟ್ ರವರು ಇಂದು ಇಹಲೋಕ ತ್ಯಜಿಸಿದ್ದು, ಸುದ್ದಿ ತಿಳಿದ ತಕ್ಷಣ ದಕ್ಷಿಣ ಕನ್ನಡ ಲೋಕಸಭಾ ಸದಸ್ಯ ನಳಿನ್ ಕುಮಾರ್ ಕಟೀಲ್, ಸಚಿವ ಎಸ್.ಅಂಗಾರ, ಪುತ್ತೂರು ಶಾಸಕ ಸಂಜೀವ ಮಠಂದೂರು ಭೇಟಿ ನೀಡಿದ ಅಂತಿಮ ದರ್ಶನ ಪಡೆದರು.
ಈ ವೇಳೆ ಮಾಧ್ಯಮದ ಜೊತೆ ಮಾತನಾಡಿದ ಜನಪ್ರತಿನಿಧಿಗಳು, ನಾಳೆ ವರ್ತಕರ ಸಂಘದಿಂದ ಕೆಲಗಂಟೆಗಳ ಕಾಲ ಸ್ವಯಂಪ್ರೇರಿತ ಬಂದ್ ಗೆ ನಿರ್ಧರಿಸಿದ್ದು, ಪಾರ್ಥೀವ ಶರೀರವನ್ನು ಮುಂಜಾನೆ ವಿವೇಕಾನಂದ ಕಾಲೇಜಿಗೆ ನಂತರ ಪುತ್ತೂರಿನ ಟೌನ್ ಬ್ಯಾಂಕ್ ಸಭಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಬೆಳಿಗ್ಗೆ 9ರಿಂದ 10 ಗಂಟೆಯ ತನಕ ಅವಕಾಶ ಅವಕಾಶ ಕಲ್ಪಿಸುವುದಾಗಿ ತಿಳಿಸಿದರು.