ಪುತ್ತೂರು: ಮಾಜಿ ಶಾಸಕ ಉರಿಮಜಲು ರಾಮ್ ಭಟ್ ಅವರು ಡಿ.6ರಂದು ನಿಧನರಾಗಿದ್ದು, ತಮ್ಮ ನೇತ್ರಗಳನ್ನು ದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.
ತಮ್ಮ ಮರಣದ ಬಳಿಕ ನೇತ್ರದಾನ ಮಾಡಬೇಕು ಎಂಬುದು ಅವರ ಆಸೆಯಾಗಿತ್ತು. ಅದರಂತೆ ನೇತ್ರದಾನ ಮಾಡಲಾಗಿದೆ ಎಂದು ಕುಟುಂಬದವರು ಮಾಹಿತಿ ನೀಡಿದ್ದಾರೆ.
ರಾಮ್ ಭಟ್ ರವರ ನಿಧನ ವಾರ್ತೆ ತಿಳಿದ ಬಳಿಕ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಟ್ರಸ್ಟ್‌ನಿಂದ ಬಂದ ವೈದ್ಯರು ರಾಮ್ ಭಟ್ ರವರ ಕಣ್ಣು ಪಡೆದುಕೊಂಡಿದ್ದಾರೆ.