ಉಪ್ಪಿನಂಗಡಿ: ಅನ್ಯಮತೀಯ ತಂಡವೊಂದು ಹಿಂದೂ ಯುವಕರಿಗೆ ತಲವಾರು ದಾಳಿ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದ್ದು, ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಸಂಜೀವ ಮಠಂದೂರು ರವರು, ‘ಹಿಂದೂಗಳನ್ನು ಕೆರಳಿಸಿ, ಹಿಂದೂಗಳಿಗೆ ಆಘಾತ ನೀಡುವಂತಹ ಸಂಗತಿಗಳನ್ನು ಮತೀಯವಾದಿಗಳು ಮಾಡಿದ್ದಾರೋ, ಅಂತಹ ಮತೀಯವಾದಿಗಳ ಮೇಲೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
‘ಇನ್ನೂ ಮುಂದೆ ಇಂತಹ ಯಾವುದೇ ಘಟನೆ ನಡೆಯದಂತೆ ಪೊಲೀಸ್ ಇಲಾಖೆ ಸೂಕ್ತ ಬಂದೋಬಸ್ತ್ ಗಳನ್ನು ಮಾಡಬೇಕು ಎಂದು ಹೇಳಿ ಈಗಾಗಲೇ ಸಂಸದರು, ಮತ್ತು ಸಚಿವರು ಎಸ್.ಪಿ. ಮತ್ತು ಐಜಿ ಯವರಲ್ಲಿ ಮನವಿ ಮಾಡಿದ್ದಾರೆ.
ಈ ರೀತಿಯ ಕೃತ್ಯಗಳನ್ನು ಮಾಡಿ ಮತೀಯವಾದಿಗಳು ಹಿಂದೂಗಳನ್ನು ಕೆಣಕುವಂತಹ ಕೆಲಸವನ್ನು ಮಾಡಿದ್ದಾರೆ. ಯಾವುದೇ ವ್ಯಕ್ತಿಯಾಗಿರಲಿ ಅಂತಹ ವ್ಯಕ್ತಿಯನ್ನು ತಕ್ಷಣ ಬಂಧಿಸಿ, ಸೂಕ್ತ ಕ್ರಮ ಕೈಗೊಂಡು, ಸರ್ಕಾರ ಅಂತಹ ವ್ಯಕ್ತಿಗಳನ್ನು ಮತ್ತೆ ಗಡಿಪಾರು ಮಾಡಬೇಕು. ಅದಕ್ಕಾಗಿ ಪೊಲೀಸ್ ಇಲಾಖೆಗೂ ಒತ್ತಡವನ್ನು ಹೇರುತ್ತಿದ್ದೇವೆ. ಎಲ್ಲರೂ ಶಾಂತಿ ಸುವ್ಯವಸ್ಥೆ ಕಾಪಾಡುವ ಮುಖಾಂತರ ಜನ ಸಾಮಾನ್ಯರಿಗೆ ಯಾವುದೇ ತೊಂದರೆಯಾಗದಂತೆ ಸಹಕರಿಸಬೇಕು ಎಂದರು.