ಮಂಗಳೂರು: ಕಾರ್ಯಕ್ರಮವೊಂದರಲ್ಲಿ ಅಸ್ವಸ್ಥಗೊಂಡ ಮಹಿಳೆಗೆ ಜಿಲ್ಲಾಧಿಕಾರಿಯೇ ಚಿಕಿತ್ಸೆ ನೀಡಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ಸಜಿಪದಲ್ಲಿ ನಡೆದಿದೆ.
ಸ್ಯಾಕ್ಸೊಫೋನ್ ಮಾಂತ್ರಿಕ ದಿವಂಗತ ಕದ್ರಿ ಗೊಪಾಲನಾಥ್ ಅವರ ಸ್ಮರಣಾರ್ಥ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕದ್ರಿ ಗೋಪಾಲ್ ನಾಥ್ ಅವರ ಪತ್ನಿ ಸರೋಜಿನಿ ಭಾವುಕರಾಗಿ ಅಸ್ವಸ್ಥಗೊಂಡಿದ್ರು. ಆಗ ಖುದ್ದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರೇ ಸರೋಜಿನಿ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಸಮಯ ಪ್ರಜ್ಞೆ ಮೆರೆದಿದ್ದಾರೆ.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ವೈದ್ಯರಾಗಿದ್ದಾರೆ. ಸಕಾಲಕ್ಕೆ ಸಮಯ ಪ್ರಜ್ಞೆ ಮೆರೆದ ಜಿಲ್ಲಾಧಿಕಾರಿ ಮಾನವೀಯತೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.