ಬಂಟ್ವಾಳ: ಜೆಸಿಐ ವಲಯ ಸಮ್ಮೇಳನವು ಬಂಟ್ವಾಳ ಬಂಟರ ಭವನದಲ್ಲಿ ನಡೆಯಿತು. ಸಮ್ಮೇಳನದಲ್ಲಿ ಮುಖ್ಯ ಅತಿಥಿಗಳಾಗಿ ಚಲನಚಿತ್ರ ನಟ ಸಾಯಿಕುಮಾರ್ ಹಾಗೂ ಜೆಸಿಯ ರಾಷ್ಟ್ರೀಯ ನಾಯಕರುಗಳು ಭಾಗವಹಿಸಿದ್ದರು.
ಸಮ್ಮೇಳನದಲ್ಲಿ ಪುತ್ತೂರಿಗೆ ಸಮಗ್ರ ಪ್ರಶಸ್ತಿ ಪ್ರತಿಷ್ಠಿತ ಲೋಕೇಶ್ ಪೆರ್ಗಡೆ ಮೆಮೋರಿಯಲ್ರೋಲಿಂಗ್ ಟ್ರೋಫಿ ಹಾಗೂ ಜೆಸಿ ಸ್ವಾತಿ ರವರಿಗೆ ವಲಯದ ಅತ್ಯುತ್ತಮ ಅಧ್ಯಕ್ಷ ಮತ್ತು ಜೇಸಿರೇಟ್ ಜೆಜೆಸಿ ವಿಭಾಗದಲ್ಲಿ ವಿನ್ನರ್ ಟ್ರೋಫಿ ಮತ್ತು ಇತರ ಎಲ್ಲಾ ವಿಭಾಗಗಳಲ್ಲಿಯೂ ವಿಜೇತ ಟ್ರೋಫಿ ಲಭ್ಯವಾಯಿತು.
ಜೆಸಿ ಸ್ವಾತಿ ಜೆ ರೈ ಅಧ್ಯಕ್ಷತೆಯಲ್ಲಿ ಪುತ್ತೂರು ವಲಯದಲ್ಲಿ ಅತ್ಯುತ್ತಮ ಘಟಕವಾಗಿ ಮೂಡಿ ಬಂದಿದೆ. ಕಾರ್ಯಕ್ರಮದಲ್ಲಿ ಸಮ್ಮೇಳನದಲ್ಲಿ ಜೆಸಿ ಪುತ್ತೂರಿನ ಐವತ್ತಕ್ಕಿಂತಲೂ ಹೆಚ್ಚು ಸದಸ್ಯರು ಭಾಗಿಯಾಗಿದ್ದರು.