ಉಪ್ಪಿನಂಗಡಿಯಲ್ಲಿ ಡಿ.6 ರಂದು ನಡೆದ ಹಿಂದೂ ಕಾರ್ಯಕರ್ತರ ಕೊಲೆಯತ್ನ ಪ್ರಕರಣವನ್ನು ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಖಂಡಿಸಿದೆ.
ಡಿ.6 ರಂದು ಸಂಜೆ ಉಪ್ಪಿನಂಗಡಿ ಹಳೆಗೇಟ್ ಬಳಿ ಅಶೋಕ್ ಶೆಟ್ಟಿ, ಮೋಹನ್, ಮಹೇಶ್ ಮೇಲೆ ಯಾವುದೇ ಕಾರಣವಿಲ್ಲದೇ ಉಪ್ಪಿನಂಗಡಿಯ ಅನ್ಯಕೋಮಿನ 20 ಜನರ ತಂಡ ಮಾರಕಾಸ್ತ್ರಗಳೊಂಗಿದೆ ಆಗಮಿಸಿ ಹಿಂದೂ ಯುವಕರ ಕೊಲೆ ಯತ್ನಕ್ಕೆ ಪ್ರಯತ್ನಿಸಿದ್ದು, ಗಾಯಗೊಂಡ ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಉಪ್ಪಿನಂಗಡಿಯ ಪರಿಸರದಲ್ಲಿ ಈ ಮೊದಲು ಅದೇ ಮೀನಿನ ಅಂಗಡಿಗೆ ಬೆಂಕಿ ಇಟ್ಟಿದ್ದು, ಆದರೂ ಪೊಲೀಸ್ ಇಲಾಖೆ ಮತ್ತು ಜಿಲ್ಲಾಡಳಿತ ಆರೋಪಿಗಳನ್ನು ಬಂಧಿಸದೇ ಇದ್ದು, ಹಿಂದೆ ನಡೆದಂತಹ ಬೇರೆ ಬೇರೆ ಪ್ರಕರಣಗಳಲ್ಲಿ ಮತಾಂಧರ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ, ನಿನ್ನೆ ನಡೆದ ಕೊಲೆಯತ್ನ ಆರೋಪಿಗಳನ್ನು ಕೂಡಲೇ ಬಂಧಿಸದಿದ್ದಲ್ಲಿ ಮುಂದೆ ಆಗುವ ಅನಾಹುತಗಳಿಗೆ ಜಿಲ್ಲಾಡಳಿತವೇ ಹೊಣೆ ಎಂದು ಹಿಂದೂ ಜಾಗರಣ ವೇದಿಕೆ ಕಡಬ ತಾಲೂಕು ಅಧ್ಯಕ್ಷ ಮಲ್ಲೇಶ್ ಆಲಂಕಾರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ..




























