ವಿಟ್ಲ: ವರ್ಗಾವಣೆಗೊಂಡ ಸಹ ಶಿಕ್ಷಕಿ ಯರಾದ ಸುಜಾತ ಮತ್ತು ಜೆಸಿಂತಾ ಲೋಬೊ ರವರ ಬೀಳ್ಕೊಡುವ ಸಮಾರಂಭ ಮತ್ತು ಖ್ಯಾತ ಸ್ಯಾಕ್ಸೋಫೋನ್ ವಾದಕ ಜಿಲ್ಲಾ ಪ್ರಶಸ್ತಿ ವಿಜೇತರಾದ ಡಾ. ಪಿ ಕೆ ದಾಮೋದರ್ ರವರ ಅಭಿನಂದನಾ ಕಾರ್ಯಕ್ರಮ ಡಿ.7 ರಂದು ಪಡಿಬಾಗಿಲು ಶಾಲೆಯಲ್ಲಿ ನಡೆಯಿತು.
ಶಾಲಾ ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಬಾಲಕೃಷ್ಣ ಕಾರಂತ ರವರು ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಪದ್ಮಾವತಿ, ಎಸ್ ಡಿ ಎಮ್ ಸಿ ಸದಸ್ಯರಾದ ಜಿನಚಂದ್ರ ಜೈನ್, ಜಗಜ್ಜೀವನ್ ರಾಮ್ ಶೆಟ್ಟಿ, ಶಶಿಕಲಾ, ಪುಷ್ಪಲತಾ, ಉಷಾ, ಕಾಂತಿ, ಜನಾರ್ದನ್, ವಿಶಾಲಾಕ್ಷಿ, ಮನೋಹರ ಆಚಾರ್ಯ, ಅಮಿತಾ, ಸೀತಾರಾಮ ಶೆಟ್ಟಿ, ವಿದ್ಯಾಸಿರಿ ಶಿಕ್ಷಣ ಕೇಂದ್ರದ ಅಧ್ಯಕ್ಷರಾದ ಪ್ರಭಾಕರ್ ಶೆಟ್ಟಿ ,ಗೌರವಾಧ್ಯಕ್ಷರಾದ ಲಿಂಗಪ್ಪ ಗೌಡ, ಸಿಆರ್ ಪಿ ಪುಷ್ಪ ಉಪಸ್ಥಿತರಿದ್ದರು.
ಸುಜಾತಾ, ಜೇಸಿಂತ ಲೋಬೊ ಮತ್ತು ಡಾ.ಪಿಕೆ ದಾಮೋದರ್ ರವರಿಗೆ ಫಲ ಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.ಮುಖ್ಯ ಶಿಕ್ಷಕಿ ಶಶಿಕಲಾ ಡಾ l ಪಿ ಕೆ ದಾಮೋದರ ರವರ ಸಾಧನೆ ಬಗ್ಗೆ ಪರಿಚಯಿಸಿದರು. ಸಹ ಶಿಕ್ಷಕಿ ಲಲಿತ ಸಹ ಶಿಕ್ಷಕರ ಬಗ್ಗೆ ತಿಳಿಸಿದರು. ಶಿಕ್ಷಕಿ ಪುಷ್ಪ ಎಲ್ಲರನ್ನು ಸ್ವಾಗತಿಸಿದರು. ಶಿಕ್ಷಕರಾದ ಮುತ್ತುರಾಜ್ ಮಲ್ಲಿಗಾವಾಡ ಧನ್ಯವಾದ ಸಮರ್ಪಿಸಿದರು. ಸಹ ಶಿಕ್ಷಕಿ ಮಲ್ಲಿಕಾ ಕಾರ್ಯಕ್ರಮ ನಿರೂಪಿಸಿದರು.