ಹೈದರಬಾದ್: ಟಾಲಿವುಡ್‌ನ ಯುವ ನಟಿ, ಯೂಟ್ಯೂಬ್ ವೀಡಿಯೋಗಳಿಂದ ಪ್ರಸಿದ್ದ ಪಡೆದಿದ್ದ ಶ್ರೇಯಾ ಮುರಳಿಧರ್(27) ಹೃದಯಾಘಾತದಿಂದ ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ.
ಶ್ರೇಯಾ ಮೂಲತಃ ಹೈದರಾಬಾದ್ ನವರಾಗಿದ್ದು, ಆಕೆಯ ಯೂಟ್ಯೂಬ್ ಚಾನಲ್‌ನಲ್ಲಿ ಸಾವಿರಾರು ಅಭಿಮಾನಿಗಳನ್ನು ಹೊಂದಿದ್ದಳು.
ಯೂಟ್ಯೂಬರ್ ಆಗಿ, ಕಿರುತೆರೆಯಲ್ಲಿ ಹೆಸರು ಮಾಡಿ ಭರವಸೆ ನಟಿಯಾಗಿ ಬೆಳೆದಿದ್ದ ಶ್ರೇಯಾ ‘ಪೆಲ್ಲಿ ಚೂಪುಲು’ ರಿಯಾಲಿಟಿ ಶೋ ದಲ್ಲೂ ಶ್ರೇಯಾ ಭಾಗಿಯಾಗಿ ಗಮನ ಸೆಳೆದಿದ್ದರು.
ಯುವತಾರೆಯ ಸಾವಿಗೆ ಸಂತಾಪಗಳ ಮಹಾಪೂರವೇ ಹರಿದುಬರುತ್ತಿದ್ದು, ಅವರ ಸಾವು ಅವರ ಅಭಿಮಾನಿಗಳಿಗೆ ಆಘಾತವನ್ನುಂಟು ಮಾಡಿದೆ.