ಪುತ್ತೂರು: ಶಿವರಾಮ ಆಳ್ವ ಬಳ್ಳಮಜಲು ರವರ ನೇತೃತ್ವದಲ್ಲಿ, ವಲಯ ಕಾಂಗ್ರೆಸ್ ವತಿಯಿಂದ ಹಾಗೂ ಊರಿನವರ ಸಹಕಾರದೊಂದಿಗೆ ಪರ್ಪುಂಜ-ಪಂಜಳ ರಸ್ತೆ ಬದಿಯನ್ನು ಸ್ವಚ್ಛಗೊಳಿಸಲಾಯಿತು.
ರಸ್ತೆ ಬದಿಯಲ್ಲಿ ಬೆಳೆದಿರುವ ಅನಾವಶ್ಯಕ ಹುಲ್ಲು, ಗಿಡಗಂಟಿಗಳನ್ನು ತೆಗೆದು ರಸ್ತೆಯನ್ನು ಸ್ವಚ್ಚಗೊಳಿಸಿದರು.
ಈ ಸಂದರ್ಭದಲ್ಲಿ ಜಯ ಪ್ರಕಾಶ್ ರೈ ಬಳ್ಳಮಜಲು, ಪಂಚಾಯತ್ ಸದಸ್ಯ ಯಕೂಬ್, ನರೇಂದ್ರ ರೈ, ವಲಯಾಧ್ಯಕ್ಷ ಸನತ್ ರೈ, ಸೂಫಿ ಕುರಿಯ, ಎರಡನೇ ವಾರ್ಡ್ ಅಧ್ಯಕ್ಷ ಆಸೀಪ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.