ಹಲವು ವರ್ಷಗಳಿಂದ ಹಿಂದು ಸಮಾಜದ ರಕ್ಷಣೆಗಾಗಿ ಕಾರ್ಯ ನಿರ್ವಹಿಸುತ್ತಿರುವ ವಿಶ್ವ ಹಿಂದೂ ಪರಿಷದ್ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಅವರ ಪೋಟೋ ಹಾಗೂ ಮೊಬೈಲ್ ಸಂಖ್ಯೆಯನ್ನು ಹಾಕಿ ಎಡಿಟ್ ಮೂಲಕ ನಕಲಿ ಖಾತೆ ಸೃಷ್ಟಿಸಿ ಉಪ್ಪಿನಂಗಡಿ ಘಟನೆಯ ವಿಷಯವನ್ನು ಪ್ರಸ್ತಾಪಿಸಿ ಸುಳ್ಳು ಸುದ್ದಿ ರಚಿಸಿ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಿರುವ ಘಟನೆ ನಡೆದಿದ್ದು.
ಹಾಗೂ ಇದನ್ನು ಹಲವು ಗ್ರೂಪ್ ಗಳಲ್ಲಿ ರವಾನಿಸಿ ಸುಳ್ಳು ಸುದ್ದಿ ಹಬ್ಬಿಸುವ ಷಡ್ಯಂತ್ರ ನಡೆದಿದ್ದು.
ಇಂತಹ ಕೃತ್ಯಗಳನ್ನು ನಡೆಸಿದ ಅರೋಪಿಗಳನ್ನು ಶೀಘ್ರವಾಗಿ ಪತ್ತೆ ಹಚ್ಚಿ ಶಿಕ್ಷೆ ನೀಡಬೆಕೇಂದು ಆಗ್ರಹಿಸಿ ಬಜರಂಗದಳ ಪುತ್ತೂರು ನಗರ ಪ್ರಖಂಡ ಸಂಯೋಜಕ್ ಹರೀಶ್ ಕುಮಾರ್ ದೊಳ್ಪಾಡಿ ಅವರು ಪುತ್ತೂರು ನಗರ ಠಾಣೆಗೆ ಲಿಖಿತ ದೂರು ಸಲ್ಲಿಸಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಪುತ್ತೂರು ಜಿಲ್ಲಾ ಪ್ರಚಾರ ಪ್ರಸಾರ ಪ್ರಮುಖ್ ಶ್ರೀಧರ್ ತೆಂಕಿಲ,ಬಜರಂಗದಳ ಪುತ್ತೂರು ಜಿಲ್ಲಾ ಸುರಕ್ಷಾ ಪ್ರಮುಖ್ ಜಯಂತ್ ಕುಂಜೂರುಪಂಜ, ಪುತ್ತೂರು ನಗರ ಪ್ರಖಂಡ ಬಜರಂಗದಳ ಸಹ ಸಂಯೋಜಕ್ ಚೇತನ್ ಬೊಳ್ವಾರ್,ಬಜರಂಗದಳ ಪುತ್ತೂರು ನಗರ ಪ್ರಖಂಡ ಸಹ ಸುರಕ್ಷಾ ಪ್ರಮುಖ್ ಧನರಾಜ್ ಬೆಳ್ಳಿಪ್ಪಾಡಿ ಹಾಗೂ ಪುತ್ತೂರು ಪ್ರಖಂಡ ಪ್ರಚಾರ ಪ್ರಸಾರ ಪ್ರಮುಖ್ ಭರತ್ ಬಲ್ನಾಡ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.