ಬೆಳ್ತಂಗಡಿ: ವಿದ್ಯಾರ್ಥಿಯೋರ್ವ ನದಿ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಬೆಳ್ತಂಗಡಿಯ ಹಿಂದೂ ರುದ್ರಭೂಮಿಯ ಸಮೀಪವಿರುವ ಸೋಮಾವತಿ ನದಿಯಲ್ಲಿ ನಡೆದಿದೆ.
ಮೃತರನ್ನು ಶ್ರೀ ಗುರುದೇವ ಕಾಲೇಜಿನಲ್ಲಿ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ವಿದ್ಯಾರ್ಥಿ ಸಮರ್ಥ್(17) ಎನ್ನಲಾಗಿದೆ.
ಸಮರ್ಥ್ ಮೂಲತಃ ಮೂಡಿಗೆರೆ ನಿವಾಸಿಯಾಗಿದ್ದು, ಬೆಳ್ತಂಗಡಿಯ ಸುದೆಮುಗೇರು ಸಂಜಯ ನಗದರ ಬಳಿ ಪಿಜಿಯಲ್ಲಿ ವಾಸ್ತವ್ಯವಿದ್ದ. ಬೆಳ್ತಂಗಡಿಯ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನಲಾಗಿದೆ.