ಉಡುಪಿ: ಭಿಕ್ಷೆ ಬೇಡಲು ಮನೆಗೆ ಬಂದಿದ್ದ ಫಕೀರರ ತಂಡವೊಂದು ಕನ್ನಡದ ಬೆಲ್ ಬಾಟಮ್ ಸಿನಿಮಾ ಶೈಲಿಯಲ್ಲಿ ಉಡುಪಿಯಲ್ಲಿ ಚಿನ್ನಾಭರಣ ಕಳವು ಮಾಡಿದ ಘಟನೆ ನಡೆದಿದೆ.
ಉಡುಪಿ ಕಟಪಾಡಿಯ ಏನಗುಡ್ಡೆಯ ಮುಸ್ಲಿಂ ಕುಟುಂಬದ ಮನೆಗೆ ಹಾಡುಗಳನ್ನು ಹಾಡುತ್ತ ಮನೆಗೆ ಬಂದಿದ್ದ ಫಕೀರರ ವೇಷದಲ್ಲಿ ಭಿಕ್ಷೆ ಬೇಡಲು ಮನೆಗೆ ಬಂದಿದ್ದರು.
ಅವರ ಮನೆಯ ಮುಂದೆ ಧೂಪದ ಹೊಗೆ ಹಾಕಿ ಮಹಿಳೆಯನ್ನು ಯಾಮಾರಿಸಿದ್ದಾರೆ. ಈ ವೇಳೆ ಫಕೀರರ ಮೋಡಿಗೆ ಒಳಗಾಗಿ ಮನೆಯಲ್ಲಿದ್ದ ಚಿನ್ನಾಭರಣವನ್ನು ಕಳ್ಳರಿಗೆ ಮಹಿಳೆ ತಂದುಕೊಟ್ಟಿದ್ದಾಳೆ.
ಈ ಮೋಸದಿಂದ ಲಕ್ಷಾಂತರ ರೂಪಾಯಿ ಮೌಲ್ಯದ ಆಭರಣಗಳನ್ನು ಮಹಿಳೆ ಕಳೆದುಕೊಂಡಿದ್ದಾಳೆ. ಇದೀಗ ಕಳ್ಳರ ತಂಡದ ಸಿಸಿಟಿವಿ ಫೂಟೇಜ್ ಸಂಗ್ರಹಿಸಿರುವ ಪೊಲೀಸರು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ. ಮನೆಗೆ ಬರುವ ಪ್ರತೀ ಭಿಕ್ಷುಕರ ಬಗ್ಗೆ ಎಚ್ಚರ ವಹಿಸುವಂತೆ ಪೊಲೀಸರು ಮನವಿ ಮಾಡಿಕೊಂಡಿದ್ದಾರೆ.