ತಿರುವನಂತಪುರ: ಮಲಯಾಳಂನ ಖ್ಯಾತ ನಿರ್ದೇಶಕ ಅಲಿ ಅಕ್ಬರ್ ಹಾಗೂ ಅವರ ಪತ್ನಿ ಹಿಂದೂ ಧರ್ಮಕ್ಕೆ ಮತಾಂತರವಾಗಲು ನಿರ್ಧರಿಸಿದ್ದಾರೆ.
ಸಿಡಿಎಸ್ ಜನರಲ್ ಬಿಪಿನ್ ರಾವತ್ ಅವರ ದುರಂತ ಸಾವನ್ನು ಆಚರಿಸಿದವರ ವಿರುದ್ಧ ಪ್ರತಿಭಟನೆಗಾಗಿ ಇಸ್ಲಾಂ ಧರ್ಮವನ್ನು ತೊರೆಯುವುದಾಗಿ ಹೇಳಿದ್ದಾರೆ. ಶುಕ್ರವಾರ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ಅಕ್ಬರ್ ಈ ಘೋಷಣೆ ಮಾಡಿದ್ದಾರೆ.
“ಡಿಎಸ್ ಬಿಪಿನ್ ರಾವತ್ ಅವರ ದುರ್ಮರಣಕ್ಕೆ ಕೆಲವು ಮುಸ್ಲಿಮರು ಸಂತಸ, ನಗುವಿನ ಎಮೋಜಿ ಹಾಕಿ ಹರ್ಷೋದ್ಗಾರ ಮಾಡಿದ್ದರು. ಸಿಡಿಎಸ್ ಬಿಪಿನ್ ರಾವತ್ ಅವರ ಸಾವನ್ನು ಸಂಭ್ರಮಿಸಿದ್ದ ದೇಶವಿರೋಧಿ ಮುಸ್ಲಿಮರ ನಡೆಯನ್ನು ಸಮುದಾಯದ ಯಾವುದೇ ಓರ್ವ ನಾಯಕನೂ ಖಂಡಿಸಿಲ್ಲ. ಆದ್ದರಿಂದ ಇಸ್ಲಾಮ್ ಧರ್ಮದಲ್ಲಿ ನನಗೆ ನಂಬಿಕೆ ಹೋಗಿದೆ ” ಎಂದು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ವಿಡಿಯೋ ಮೂಲಕ ತಿಳಿಸಿದ್ದಾರೆ.