ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಇದರ ಹಿರಿಯ ಕಾರ್ಯಕರ್ತ ಕನ್ನಡ್ಕ ಗಣೇಶ್ ನಾಯಕ್ ಇಂದಾಜೆ(59) ಡಿ.11ರಂದು ಮಂಗಳೂರು ಆಸ್ಪತ್ರೆಯಲ್ಲಿ ಹೃದಯಾಘಾತದಿಂದ ನಿಧನರಾದರು.
ಗಣೇಶ್ ನಾಯಕ್ ಅವರು ಪುತ್ತೂರಿನ ಬೊಳುವಾರಿನಲ್ಲಿ ಹಲವು ವರ್ಷಗಳ ಹಿಂದೆ ಬ್ರೈಟ್ ಸಂಸ್ಥೆಯ ಆರಂಭಿಸಿ ಹಲವಾರು ಮಂದಿಗೆ ಟೈಪ್ರೇಟಿಂಗ್ ಸೇರಿದಂತೆ ಶಿಕ್ಷಣದ ಮಾರ್ಗದರ್ಶಕರಾಗಿದ್ದರು.
ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಕ್ರೀಯ ಕಾರ್ಯಕರ್ತರಾಗಿದ್ದರು. ಈ ನಡುವೆ ಅವರ ಆರೋಗ್ಯದಲ್ಲಿ ಏರುಪೇರು ಕಂಡ ಹಿನ್ನೆಲೆಯಲ್ಲಿ ಮಣಿಪಾಲದಲ್ಲಿ ವಾಸ್ತವ್ಯ ಹೊಂದಿದ್ದರು.
ಮೃತರು ಪತ್ನಿ ವಂದನಾ ನಾಯಕ್, ಪುತ್ರಿ ಐಶ್ವರ್ಯ, ಪುತ್ರ ಅಭಿಷೇಕ್ ಮತ್ತು ಸಹೋದರ ಸಹೋದರಿಯರನ್ನು ಅಗಲಿದ್ದಾರೆ.