ಪಾಣಾಜೆ: ಕೆಪಿಸಿಸಿಯ ನಿರ್ದೇಶನದಂತೆ ಡಿ.11 ರಂದು ಡಿ ಕೆ ಶಿವಕುಮಾರ್ ರವರ ಉಪಸ್ಥಿತಿಯಲ್ಲಿ ನಡೆದ ZOOM Live ಪ್ರೋಗ್ರಾಮ್ ನಲ್ಲಿ ಪುತ್ತೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ಪಾಣಾಜೆ ವಲಯದ ಆರ್ಲಪದವು ಎಂಬಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ ಬಿ ವಿಶ್ವನಾಥ ರೈ ಯವರ ನೇತೃತ್ವದಲ್ಲಿ ಮನೆ ಮನೆಗೆ ಭೇಟಿ ನೀಡುವ ಮೂಲಕ ಏಕದಿನದ ಕಾಂಗ್ರೆಸ್ ಸದಸ್ಯತ್ವ ನೋಂದಾವಣೆ ಕಾರ್ಯಕ್ರಮ ನಡೆಸಲಾಯಿತು.
ಈ ಕಾರ್ಯಕ್ರಮದಲ್ಲಿ ಪಾಣಾಜೆ ವಲಯ ಕಾಂಗ್ರೆಸ್ ಅಧ್ಯಕ್ಷ ಬಾಬು ರೈ ಕೋಟೆ, ಪಾಣಾಜೆ ಗ್ರಾಮ ಪಂಚಾಯತ್ ಸದಸ್ಯ ನಾರಾಯಣ ನಾಯಕ್, ಬ್ಲಾಕ್ ಅಲ್ಪ ಸಂಖ್ಯಾತ ಘಟಕದ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಶಾಫಿ ಕಂಜಿಲ್ ಕುಂಜ, ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿಣಿ ಸದಸ್ಯ ಜಗಮೋಹನ್ ರೈ ಕೆದಂಬಾಡಿ ಮೊದಲಾದವರು ಉಪಸ್ಥಿತರಿದ್ದು, ಸದಸ್ಯತ್ವ ನೋಂದಾವಣೆ ಮಾಡಲು ಸಹಕರಿಸಿದರು.





























