ವಿಟ್ಲ ಪಡ್ನೂರು: ಮಹಾ ಶಕ್ತಿ ಕೇಂದ್ರದ ಅನಂತಾಡಿ, ನೆಟ್ಲಮುಡ್ನೂರು,ವೀರಕಂಭ ಮತ್ತು ವಿಟ್ಲ ಪಡ್ನೂರು ಗ್ರಾಮಗಳನ್ನೊಡಗೊಂಡ ಬೂತ್ ಅಧ್ಯಕ್ಷರು ಕಾರ್ಯದರ್ಶಿ ಪಂಚಾಯತ್ ಸದಸ್ಯರ ಸಭೆಯು ವೀರಕಂಭ ಗ್ರಾಮದ ಕೆಲಿಂಜ ಸಭಾಭವನದಲ್ಲಿ ನಡೆಯಿತು.
ಸಭೆಯ ಅಧ್ಯಕ್ಷತೆಯನ್ನು ಮಂಡಲ ಪ್ರಧಾನ ಕಾರ್ಯದರ್ಶಿ ರವೀಶ್ ಶೆಟ್ಟಿ ಕರ್ಕಡ ವಹಿಸಿದ್ದು, ವೇದಿಕೆಯಲ್ಲಿ ವಿಟ್ಲ ಪಡ್ನೂರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಸನತ್ ಕುಮಾರ್ ರೈ ವೀರಕಂಭ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ ,ವಿಟ್ಲ ಪಡ್ನೂರು ಪಂಚಾಯತ್ ಅಧ್ಯಕ್ಷೆ ರೇಷ್ಮಾ ಶಂಕರ್ ,ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ಮಾಧವ ಮಾವೆ,ಮಾಧ್ಯಮ ಪ್ರಮುಖ ದೇವಿಪ್ರಸಾದ್ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಅರವಿಂದ ರೈ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಹುತಾತ್ಮ ಸಿಡಿಎಸ್ ಬಿಪಿನ್ ರಾವತ್ ,ಅವರ ಧರ್ಮಪತ್ನಿ ಸೇರಿದಂತೆ ಎಲ್ಲಾ ಹುತಾತ್ಮ ಯೋಧರ ಭಾವಚಿತ್ರಕ್ಕೆ ದೀಪ ಪ್ರಜ್ವಲನೆ ಮಾಡಿ ಪುಷ್ಪಾರ್ಪಣೆ ಮಾಡಲಾಯಿತು.ಅಸ್ಸಾಂ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಹವಾಲ್ದಾರ್ ಸಂತೋಷ್ ರಾಯರಬೆಟ್ಟು ದೀಪ ಪ್ರಜ್ವಲನೆ ಮಾಡಿ ನುಡಿ ನಮನ ಸಲ್ಲಿಸಿದರು.
ಸಭೆಯಲ್ಲಿ ಮಂಡಲ ಕಾರ್ಯದರ್ಶಿ ರವೀಶ್ ಕರ್ಕಡ ಮತ್ತು ಮಾಧವ ಮಾವೆಯವರು ಪಕ್ಷ ಸಂಘಟನೆ, ಪದಾಧಿಕಾರಿಗಳ ಉಪಸ್ಥಿತಿ ಬಗ್ಗೆ ಮಾತಾಡಿದರು. ಸನತ್ ಕುಮಾರ್ ರೈ ಸ್ವಾಗತಿಸಿ, ಅರವಿಂದ ರೈ ಧನ್ಯವಾದಗೈದರು. ನಾಗೇಶ್ ಭಂಡಾರಿ ಕರಿಂಕ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಹುತಾತ್ಮ ಯೋಧರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.































