ಪುತ್ತೂರು : ಸಿಹಿ ತಿನಿಸುಗಳು ಅಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ? ಎಲ್ಲರೂ ಬಯಸುವ ರುಚಿಯೇ ಈ ಸಿಹಿತಿನಿಸುಗಳು.. ಸಿಹಿತಿನಿಸುಗಳಿಗೆ ಪುತ್ತೂರಿನಲ್ಲಿ ಸಿಕ್ಕಾಪಟ್ಟೆ ಫೇಮಸ್ ಆಗಿರುವ ಮಳಿಗೆಯೇ ಪ್ರೇಮಾ ಬೇಕರಿ. ಸುದೀರ್ಘ 42 ವರ್ಷಗಳಿಂದ ಬೇಕರಿ ತಯಾರಿಕಾ ಅನುಭವದೊಂದಿಗೆ ಪುತ್ತೂರಿನ ಹಾಗೂ ಹತ್ತೂರಿನ ಗ್ರಾಹಕರ ಮನ ಮನೆ ಗೆದ್ದಿರುವ ದರ್ಬೆ ಶ್ರೀ ಲಕ್ಷ್ಮೀ ಕಮರ್ಷಿಯಲ್ ಸೆಂಟರ್ ನಲ್ಲಿ ತನ್ನ ಮೂರನೇ ಶಾಖೆಯನ್ನು ತೆರೆದು ವಿಶ್ವಾಸಪೂರ್ಣ ಗ್ರಾಹಕ ಸೇವೆಯ ಜತೆಗೆ ಫೆ. 11ರಂದು ನೂತನ ಹೆಜ್ಜೆ ಇಡುತ್ತಿದೆ.
‘ಪ್ರೇಮ’ ಸಿಹಿಬಾಂಧವ್ಯದ ತಾಣ:1977ರಲ್ಲಿ ಪರ್ಲಡ್ಕದಲ್ಲಿ ಪುಟ್ಟದಾದ ಮಾದರಿಯಲ್ಲಿ ಆರಂಭಗೊಂಡು ಇಂದು ಸಂಸ್ಥೆಯನ್ನು ವಿಸ್ತರಿಸಿಕೊಂಡು ಗ್ರಾಹಕರ ಪ್ರೀತಿಗೆ ಪಾತ್ರವಾಗಿದೆ ಪ್ರೇಮಾ ಬೇಕರಿ. ಶುಚಿ ರುಚಿಗೆ ಮಹತ್ವ ನೀಡುತ್ತಾ, ಉತ್ಕೃಷ್ಟ ಗುಣಮಟ್ಟದ ಸಿಹಿ-ಖಾರ ತಿಂಡಿ ಹಾಗೂ ಕೇಕ್ ತಯಾರಿಕೆಯಲ್ಲಿ ವಿಭಿನ್ನವಾಗಿ ಜನಮನಗೆದ್ದಿದೆ.. ಪರ್ಲ್ ಸಿಟಿ ಬೆಸ್ಟ್ ಬೇಕರಿ ಅವಾರ್ಡ್ ಪಡೆದಿರುವ ಪ್ರೇಮ ಬೇಕರಿ ಸಿಹಿತಿಂಡಿ, ಬಿಸ್ಕತ್, ಕೇಕ್ಸ್, ಖಾರ ತಿಂಡಿ, ಸ್ಯಾಂಡ್ವಿಚ್, ಪಪ್ಸ್, ಜ್ಯೂಸ್ ಉತ್ಪನ್ನಗಳಿಗೆ ಹೆಸರುವಾಸಿಯಾಗಿದ್ದು ಗ್ರಾಹಕರಿಗೆ ಒಪ್ಟುವಂತೆ ಎಲ್ಲಾ ಉತ್ಪನ್ನಗಳನ್ನೂ ಪೂರೈಸುತ್ತಿದೆ. ಇದೀಗ ವಿಶೇಷವಾಗಿ ಬಿಸ್ಕತ್ ಟೀ ಮೂಲಕ ಗ್ರಾಹಕರನ್ನು ತಲುಪುತ್ತಿದೆ.
ಇನ್ಮುಂದೆ ಚಹಾ ಕಪ್ ಕೂಡಾ ನೋ ವೇಸ್ಟ್:ಅರೆ.. ಏನಿದು.. ಚಹಾ ಕಪ್ ಅಂದರೆ ಅದರೊಳಗಿರುವ ಚಹಾ ಮಾತ್ರ ನಮ್ಮ ಪಾಲಿಗೆ ದೊರೆಯುತ್ತದೆ. ಆ ಕಾಲ ಇತ್ತು ಕೂಡಾ.. ಆದರೆ ಇನ್ಮುಂದೆ ಪ್ರೇಮಾದಲ್ಲಿ ಚಹಾ ಕಪ್ ಕೂಡಾ ವೇಸ್ಟ್ ಅಲ್ಲ, ತೊಳೆಯೋ ಪ್ರಮೇಯವೇ ಇಲ್ಲ.. ಯಾಕೆ ಅಂತೀರಾ? ಹೌಧು.. ಈ ಚಹಾ ಕಪ್ ನ್ನು ಕೂಡಾ ಚಹಾ ಜೊತೆಗೆ ತಿಂದು ಬಿಡಬಹುದು.. ಇದು ಬಿಸ್ಕತ್ ಚಹಾ ವಿಶೇಷತೆ.. ಚಹಾ ಕುಡಿಯುವಾಗ ಇದು ಕಪ್ ಆಗಿರುತ್ತೆ.. ಚಹಾ ಖಾಲಿಯಾದ ಕೂಡಲೇ ಕಪ್ ಬಿಸ್ಕತ್ ಆಗಿ ನಾವು ಸೇವಿಸಬಹುದಾಗಿದೆ.. ಸ್ಟೀಲ್ ಗ್ಲಾಸ್ ತೊಳೆಯೋ ಸಮಸ್ಯೆಗೂ ಸಿಕ್ತಲ್ಲಾ ಬ್ರೇಕ್!..ಇಲ್ಲಿ ಹೊಟ್ಟೆಗೂ ಫುಲ್ ಕುಶ್..ಪ್ರಪ್ರಥಮ ಯೋಜನೆಗೆ ಸತಲೆಬಾಗಲೇಬೇಕು.. ಹಾಗೂ ಇದನ್ನು ಸವಿಯೋಕೆ ಫೆ. 11ರಿಂದ ಈ ಬೇಕರಿಯತ್ತ ಪ್ರವೇಶ ನೀಡಲೇಬೇಕು…