ಕುಂದಾಪುರ: ನೇರಳಕಟ್ಟೆ ಶ್ರೀಗಿರಿ ಮಹಾಲಕ್ಷ್ಮೀ ಸತ್ಯನಾಥ ದೇವಸ್ಥಾನ ವತಿಯಿಂದ 2021 ರ ಸಾಲಿನ ‘ಶ್ರೀಗಿರಿ ಮಹಾಲಕ್ಷ್ಮೀ ಅನುಗ್ರಹ ಪ್ರಶಸ್ತಿ ಪ್ರದಾನ’ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.
2020-21ನೇ ಶೈಕ್ಷಣಿಕ ಸಾಲಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ಉತ್ತಮ ಅಂಕ ಪಡೆದ ಪುತ್ತೂರು ರಮ್ಯಾ ಆರ್. ಪೈ ಅವರಿಗೆ ‘ಶ್ರೀಗಿರಿ ಮಹಾಲಕ್ಷ್ಮೀ ಅನುಗ್ರಹ ಪ್ರಶಸ್ತಿ’ ಪ್ರದಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಶ್ರೀಮತಿ ಛಾಯಾ ಮತ್ತು ರವೀಂದ್ರ ಪೈ, ಶ್ರೀಮತಿ ದಿವ್ಯಾ ಮತ್ತು ಜಯರಾಮ ಪ್ರಭು, ಶ್ರೀಮತಿ ಪ್ರತಿಭಾ ಮತ್ತು ಶಂಕರ ಪೈ, ರಾಮರಾಯ ಪೈ, ಮಂಜುನಾಥ ಪೈ, ಸದಾನಂದ ಪೈ ಉಪಸ್ಥಿತರಿದ್ದರು.
ನೇರಳಕಟ್ಟೆ ಶ್ರೀಗಿರಿ ಮಹಾಲಕ್ಷ್ಮೀ ಸತ್ಯನಾಥ ದೇವಸ್ಥಾನದ ವತಿಯಿಂದ ಪ್ರತೀ ವರ್ಷ ಸಾಧಕರಿಗೆ ಶ್ರೀಗಿರಿ ಮಹಾಲಕ್ಷ್ಮೀ ಅನುಗ್ರಹ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕ್ಷೇತ್ರದ ವತಿಯಿಂದ ಧಾರ್ಮಿಕತೆ ಜೊತೆಯಲ್ಲಿ ಸಾಮಾಜಿಕ, ಸಾಂಸ್ಕೃತಿಕ ಸೇವೆ ನಡೆಯುತ್ತಿದೆ.