ಪುತ್ತೂರು: ಪರ್ಪುಂಜ ವಿರಾಮದ ಮನೆಯಲ್ಲಿ ಚಾವಡಿ ಫ್ಯಾಮಿಲಿ ಬಾರ್ ಆಂಡ್ ರೆಸ್ಟೋರೆಂಟ್ ಡಿ.13 ರಂದು ಶುಭಾರಂಭಗೊಂಡಿತು.
ಪುತ್ತೂರಿನ ಮಾಜಿ ಶಾಸಕಿ ಶಕುಂತಳಾ ಟಿ. ಶೆಟ್ಟಿ ರಿಬ್ಬನ್ ಕತ್ತರಿಸುವ ಮೂಲಕ ಉದ್ಘಾಟಿಸಿ ಶುಭ ಹಾರೈಸಿದರು.
ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಸದಸ್ಯ ಕೆ ಟಿ ಸುವರ್ಣ ದೀಪಬೆಳಗಿಸುವ ಮೂಲಕ ಅಧಿಕೃತ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಜಯರಾಂ ಶೆಟ್ಟಿ ಬೊಳಂತೂರು, ಶಿವರಾಮ ಆಳ್ವ, ಸನತ್ ರೈ ತುಂಬೆದ ಕೋಡಿ, ಅರವಿಂದ ರೈ, ದಯಾನಂದ ರೈ ಮನವಳಿಕೆ, ಪುತ್ತೂರು ನಗರಸಭೆಯ ಅಧ್ಯಕ್ಷ ಜೀವಂದರ್ ಜೈನ್, ಲಯನ್ಸ್ ಕ್ಲಬ್ ಪ್ರಾಂತೀಯ ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಸ್ ಬಿ ಜಯರಾಮ ರೈ ಬಳೆಜ್ಜ, ಕುಂಬ್ರ ನರ್ತಕಿ ಬಾರ್ ಮಾಲಕ, ಉದ್ಯಮಿ ಪುರಂದರ್ ರೈ ಕೋರಿಕ್ಕಾರ್, ಅಮೆಚೂರು ಕಬಡ್ಡಿ ಎಸೋಶಿಯೇಶನ್ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ಸಹಜ್ ವೈನ್ಸ್ ಈಶ್ವರಮಂಗಲ ಇದರ ಮಾಲಕ ಸಹಜ್ ರೈಬಳೆಜ್ಜ,ಅರವಿಂದ ರೈ ಮೂರ್ಜಿ ಬೈಲು, ಮಾಜಿ ಶಾಸಕಿ ಮಲ್ಲಿಕಾ ಪ್ರಸಾದ್ ಭಂಡಾರಿ, ಮಾಧವ ಮಾವೆ ಬಂಟ್ವಾಳ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ, ಚನಿಲ ತಿಮ್ಮ ಶೆಟ್ಟಿ, ನ್ಯಾಯವಾದಿ ಕುಂಬ್ರ, ಪ್ರಸನ್ನ ಕುಮಾರ್ ಶೆಟ್ಟಿ ಸಿಝ್ಲರ್, ದುರ್ಗಾಪ್ರಸಾದ್ ರೈ, ರಾಜೇಶ್ ರೈ ಪರ್ಪುಂಜ, ನೆಟ್ಟಣಿಗೆ ಮುಡ್ನೂರು ಗ್ರಾಪಂ ಮಾಜಿ ಉಪಾಧ್ಯಕ್ಷ ಶ್ರೀರಾಂ ಪಕ್ಕಳ, ಸುದ್ದಿ ಸೌಹಾರ್ಧ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನರೇಂದ್ರ ,ಗುತ್ತಿಗೆದಾರ ಯುವರಾಜ್ ಕುಂಬ್ರ , ಪ್ರಗತಿಪರ ಕೃಷಿಕ ಬಾರಿಕೆ ನಾರಾಯಣ ರೈ, ಕುಂಬ್ರ ಡಿಸಿಸಿ ಬ್ಯಾಂಕ್ ಮೆನೇಜರ್ ಹರೀಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಬೂಡಿಯಾರ್ ರಾಧಾಕೃಷ್ಣ ರೈ, ಉದ್ಯಮಿ ಕರುಣಾಕರ್ ರೈ ಅಶ್ವಿನಿ, ಸಂತೋಷ್ ಶೆಟ್ಟಿ ಅಶ್ವಿನಿ, ನೆಟ್ಲ ಮುಡ್ನೂರು ಗ್ರಾಪಂ ಅಧ್ಯಕ್ಷ ಸತೀಶ್, ಅನಂತಾಡಿ ಗ್ರಾಪಂ ಅಧ್ಯಕ್ಷ ಗಣೇಶ್ ಪೂಜಾರಿ, ಹರೀಶ್ ಪೂಜಾರಿ ಬಾಕಿಲ, ಪುಷ್ಪರಾಜ್ ಚೌಟ, ಪದ್ಮ ಸೋಲಾರ್ ಸೀತಾರಾಮ ರೈ, ಅನಂತಾಡಿ , ಎಸ್ ಎಲ್ ಸಿ ಕ್ರಷರ್ ಮಾಲಕ ಲೋಕೇಶ್ ಚೌಟ, ಡಾ. ಪುತ್ತೂರಾಯ, ಜೆ ಕೆ ಜಯಕುಮಾರ್ ಪುತ್ತೂರು, ವಿನೋದ್ ಶೆಟ್ಟಿ ಅರಿಯಡ್ಕ, ಇಂಡಸ್ ಪರ್ಪುಂಜ ಮಾಲಕ ಅಜಿತ್ ರೈ, ಕೆದಂಬಾಡಿ ಗ್ರಾಪಂ ಅಧ್ಯಕ್ಷ ರನತ್ ರೈ ಕುಂಬ್ರ, ಕೃಷಿಕ ಕೃಷ್ಣಪ್ರಸಾದ್ ಭಂಡಾರಿ, ಸಂತೋಷ್ ರೈ ಇಳಂತಾಜೆ, ರವೀಂದ್ರನಾಥ ಕುರಿಯ, ಪ್ರಕಾಶ್ ರೈ ಕುರಿಯ, ಸುಧೀರ್ ಶೆಟ್ಟಿ ನೇಸರ,ಸುರೇಂದ್ರ ರೈ ನೇಸರ, ಬೋಜರಾಜ ರೈ ಕುರಿಯ ಬೆಂಗಳೂರು, ಶ್ರೀಧರ್ ಶೆಟ್ಟಿ ಬಾಳಿಕೆ, ಶಶಿಕಾಂತ ಶೆಟ್ಟಿ ಬಾಳಿಕೆ, ಶೀತಲ್ ಶೆಟ್ಟಿ ಬಾಳಿಕೆ, ಕಿರಣ್‌ಪೂಜಾರಿ ನೇರಳಕಟ್ಟೆ, ನೇರಳಕಟ್ಟೆ ಸಿ ಎಬ್ಯಾಂಕ್ ನ ಸಂಜೀವ ಪೂಜಾರಿ, ಸೇರಿದಂತೆ ಹಲವು ಮಂದಿ ಉಪಸ್ಥಿತರಿದ್ದರು.
ಮಾಲಕರಾದ ಸ್ಮಿತಾ ಎ ಆಳ್ವ ,ಆತ್ಮಿ ಆಳ್ವ ಆಡಳಿತದಾರ ನೇಹಲ್ ಶೆಟ್ಟಿ, ಹರ್ಷೇಂದ್ರ ಶೆಟ್ಟಿ ಬಾಳಿಕೆ ಅತಿಥಿಗಳನ್ನು ಸ್ವಾಗತಿಸಿದರು.
ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ:
ನೂತನವಾಗಿ ಶುಭಾರಂಭಗೊಂಡ ಚಾವಡಿ ಫ್ಯಾಮಿಲಿ ಬಾರ್ ಆಂಡ್ ರೆಸ್ಟೋರೆಂಟ್‌ನಲ್ಲಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ ಇದೆ. ಪೃಕೃತಿ ರಮಣೀಯವಾದ ಈ ಸ್ಥಳ ವಿರಾಮದ ಮನೆ ಎಂಬ ಹೆಸರಿಂದ ಪ್ರಸಿದ್ದಿ ಪಡಿದಿದ್ದು, ಪ್ರಶಾಂತ ವಾತಾವರಣ ಇಲ್ಲಿನ ವಿಶೇಷತೆಯಾಗಿದೆ.






























