ರಾಷ್ಟ್ರಕವಿ ಕುವೆಂಪು ಅವರ ಸೊಸೆ, ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿ ರಾಜೇಶ್ವರಿ ತೇಜಸ್ವಿ(85) ನಿಧನರಾಗಿದ್ದಾರೆ.
ತೀವ್ರ ಜ್ವರದಿಂದ ಬಳಲುತ್ತಿದ್ದ ರಾಜೇಶ್ವರಿ ಅವರನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೇ ರಾಜೇಶ್ವರಿ ಅವರು ಕೊನೆಯುಸಿರೆಳೆದಿದ್ದಾರೆ.
ರಾಜೇಶ್ವರಿ ಅವರು ಬರೆದಿರುವ ‘ನನ್ನ ತೇಜಸ್ವಿ’, ‘ನಮ್ಮ ಮನೆಗೂ ಬಂದರು ಗಾಂಧೀಜಿ’ ಪುಸ್ತಕ ಈಗಲೂ ಎಲ್ಲರ ನೆಚ್ಚಿನದ್ದಾಗಿದೆ. ಮೂಡಿಗೆರೆಯ ಕಾಫಿತೋಟ ಮತ್ತು ಮನೆ ನಿರುತ್ತರದಲ್ಲಿ ರಾಜೇಶ್ವರಿ ಅವರು ವಾಸವಿದ್ದರು. ತೇಜಸ್ವಿ ಅವರ ನಿಧನದ ನಂತರವೂ ರಾಜೇಶ್ವರಿ ಅವರು ತೋಟದ ಮನೆಯಲ್ಲೇ ವಾಸವಾಗಿದ್ದರು. ಅಲ್ಲಿಯೇ ಕೃಷಿ, ಬರವಣಿಗೆ, ಹೊಲಿಗೆ, ಅಂಚೆಚೀಟಿ ಸಂಗ್ರಹ ಕೂಡ ಮಾಡುತ್ತಿದ್ದರು.
ಬೆಂಗಳೂರಿನ ಎಚ್‌ಎಸ್‌ಆರ್ ಲೇಔಟ್‌ನಲ್ಲಿರುವ ಮಗಳು ಸುಶ್ಮಿತಾ ಮನೆಯಲ್ಲಿ ಸಂಜೆಯವರೆಗೂ ಅಂತಿಮ ದರ್ಶನಕ್ಕೆ ಅವಕಾಶವಿದೆ.