ಮಂಗಳೂರು: ದಕ್ಷಿಣ ಕನ್ನಡ-ಉಡುಪಿ ದ್ವಿಸದಸ್ಯ ಸ್ಥಾನದ ಎಂಎಲ್‌ಸಿ ಚುನಾವಣಾ ಮತ ಎಣಿಕೆ ಸಂಪೂರ್ಣಗೊಂಡಿದ್ದು, ನಿರೀಕ್ಷೆಯಂತೆ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿ ವಿಧಾನಪರಿಷತ್ ಮೆಟ್ಟಿಲೇರಿದ್ದಾರೆ.
ಪ್ರಥಮ ಪ್ರಾಶಸ್ತ್ಯದ ಮತಗಳಲ್ಲಿ ಎರಡು ಪಕ್ಷಗಳಿಗೆ ಜಯ ದೊರಕಿದ್ದು, ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ್ ಪೂಜಾರಿಗೆ 3672 ಮತ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ್ ಭಂಡಾರಿ 2079 ಮತ ಪಡೆದಿದ್ದಾರೆ. ಎಸ್‌ಡಿಪಿಐ ಅಭ್ಯರ್ಥಿ 204 ಮತ ಪಡೆದಿದ್ದಾರೆ.
ಒಟ್ಟು 6011 ಮತಗಳು ಇದರಲ್ಲಿ 56 ತಿರಸ್ಕೃತ ಮತ, 5955 ಮತ ಚಲಾವಣೆಯಾಗಿದೆ. ಗೆಲ್ಲಲು ಒಬ್ಬ ಅಭ್ಯರ್ಥಿಗೆ 1986 ಮತ ಬೇಕಾಗಿತ್ತು.
ಕೋಟಾ ಶ್ರೀನಿವಾಸ ಪೂಜಾರಿ ಸತತ ನಾಲ್ಕನೇ ಬಾರಿ ವಿಧಾನಪರಿಷತ್ ಚುನಾವಣೆಯಲ್ಲಿ ಗೆದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಮಂಜುನಾಥ ಭಂಡಾರಿ ಮೊದಲ ಬಾರಿ ಟಿಕೆಟ್ ಪಡೆದು ವಿಧಾನಪರಿಷತ್ ಪ್ರವೇಶಿಸಿದ್ದಾರೆ.


























