ಪುತ್ತೂರು : ಕರ್ನಾಟಕದಾದ್ಯಂತ ಸ್ವ-ಉದ್ಯೋಗದ ಕ್ರಾಂತಿಗೆ ಕಾರಣವಾದ ಧರ್ಮಸ್ಥಳ ರುಡ್ ಸೆಟ್ ಸಂಸ್ಥೆ ಮತ್ತು ಆರ್’ಸೆಟ್ ಅತಿಥಿ ಉಪನ್ಯಾಸಕಿಯಾಗಿ ಹಾಗೂ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಮಾಧವಿ ಮನೋಹರ್ ರೈ ರವರಿಗೆ Outstanding Entrepreneur ವಿಭಾಗಕ್ಕೆ ಸಂಬಂಧಿಸಿದಂತೆ 2021 ಸಾಲಿನ ಆಲ್-ಇಂಡಿಯಾ ವುಮೆನ್ಸ್ ಎಚಿವರ್ಸ್ ಅವಾರ್ಡ್’ಗೆ ಆಯ್ಕೆಯಾಗಿದ್ದಾರೆ.
TWELL ಸಂಸ್ಥೆಯ ಆಯೋಜಕತ್ವದಲ್ಲಿ ಈ ಪ್ರಶಸ್ತಿಯನ್ನು ಡಿ. 18ರಂದು ಮೈಸೂರಿನಲ್ಲಿ ಪ್ರದಾನ ಮಾಡಲಿದ್ದಾರೆ.
ಪುತ್ತೂರಿನವರಾದ ಮಾಧವಿ ಮನೋಹರ್ ರೈ ಅವರು ಪುತ್ತೂರಿನ ಮುಖ್ಯರಸ್ತೆಯಲ್ಲಿರುವ ಧರ್ಮಸ್ಥಳ ಬಿಲ್ಡಿಂಗ್ ಹಾಗೂ ಕೃಷ್ಣನಗರದಲ್ಲಿ ಶ್ರೀಮಾ ಹರ್ಬಲ್ ಬ್ಯೂಟಿ ಪಾರ್ಲರ್ ಸಂಸ್ಥೆಯನ್ನು ನಡೆಸುತ್ತಿದ್ದಾರೆ.
ಇವರಿಗೆ 2019 ನೇ ಸಾಲಿನ ಆಲ್ ಇಂಡಿಯಾ ಬ್ಯೂಟಿ ಅಸೋಶಿಯೇಷನ್ ಅವಾರ್ಡ್ ಹಾಗೂ 2020ನೇ ಸಾಲಿನ ಸೌತ್ ಇಂಡಿಯಾ ವುಮೆನ್ಸ್ ಎಚಿವರ್ಸ್ ಅವಾರ್ಡ್ ದೊರೆತಿದೆ.
ಮಾಧವಿ ಮನೋಹರ್ ರೈ ಅವರು ಧರ್ಮಸ್ಥಳ ರುಡ್ ಸೆಟ್’ನಲ್ಲಿ ಬ್ಯೂಟಿಷಿನ್ ವಿಷಯಕ್ಕೆ ಸಂಬಂಧಿಸಿ ಅತಿಥಿ ಉಪನ್ಯಾಸಕಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಸುಮಾರು 4500 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದು ಸ್ವ-ಉದ್ಯೋಗ ಮಾಡುತ್ತಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಆಶಯದಂತೆ ಪ್ರತಿ ಗ್ರಾಮದಲ್ಲಿ ಮಹಿಳೆಯರು ಹಾಗೂ ಪುರುಷರು ಸ್ವ-ಉದ್ಯೋಗದ ಸದೃಢ ಭಾರತ ನಿರ್ಮಾಣದ ಪಣಕ್ಕೆ ನಾಂದಿಯಾಗಬೇಕು ಅನ್ನೋ ಉದ್ದೇಶವನ್ನು ಇಟ್ಟುಕೊಂಡು ರುಡ್ ಸೆಟ್ ಸಂಸ್ಥೆ ಮತ್ತು ಆರ್’ಸೆಟ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ.



























