ಉಪ್ಪಿನಂಗಡಿ: ಮಂಗಳೂರು – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ಉಪ್ಪಿನಂಗಡಿಯ ಹಳೇಗೇಟು ಎಂಬಲ್ಲಿ ಹಸಿ ಮೀನು ಸ್ಟಾಲ್ ನಲ್ಲಿ ಹಿಂದೂ ಸಂಘಟನೆಯ ಮುಖಂಡರ ಮೇಲೆ ನಡೆದ ತಲ್ವಾರು ದಾಳಿಗೆ ಸಂಬಂಧಿಸಿ ಡಿ 14 ರಂದು ಬೆಳಿಗ್ಗೆ ಮೂವರನ್ನು ಉಪ್ಪಿನಂಗಡಿ ಪೊಲೀಸರು ವಶಕ್ಕೆ ಪಡೆದು ಠಾಣೆಯಲ್ಲಿಸಿದ ಘಟನೆಗೆ ಸಂಬಂಧಿಸಿದಂತೆ ಠಾಣೆ ಮುಂಭಾಗ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು.
ಇದೀಗ ಪಿಎಫ್ಐ ಪ್ರತಿಭಟನೆಗೆ ಮಣಿದ ಸರಕಾರ ಓರ್ವನನ್ನು ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಉಪ್ಪಿನಂಗಡಿಯ ಪಾಪ್ಯುಲರ್ ಫ್ರಂಟ್ ಇಂಡಿಯಾ ಸಂಘಟನೆಯ ಮುಖಂಡರು ಎನ್ನಲಾಗುತ್ತಿರುವ ಪಿಎಫ್ಐ ಜಿಲ್ಲಾಧ್ಯಕ್ಷ ಹಮೀದ್ ಮೆಜೆಸ್ಟಿಕ್, ಮುಸ್ತಫಾ ಕಡವಿನಬಾಗಿಲು, ಝಕರಿಯಾ ಎಂಬವರನ್ನು ತಲ್ವಾರ್ ದಾಳಿಯ ದಾಳಿಯ ವಿಚಾರಣೆ ನಡೆಸಲು ಪೊಲೀಸರು ವಶಕ್ಕೆ ಪಡೆದಿದ್ದರು.
ಅವರನ್ನು ವಶಕ್ಕೆ ಪಡೆದನ್ನು ಖಂಡಿಸಿ ಪಿ ಎಫ್ ಐ ಕಾರ್ಯಕರ್ತರು ಠಾಣೆ ಮುಂಭಾಗ ಪ್ರತಿಭಟನೆ ನಡೆಸಿದ್ದು, ಪ್ರತಿಭಟನಾಕಾರರು ರಸ್ತೆಯಲ್ಲೇ ನಮಾಜ್ ಮಾಡಿದ್ದರು. ಸಂಜೆಯಾಗುತ್ತಿದ್ದಂತೆ ಪಿಎಫ್ಐ ಹಾಗೂ ಪೊಲೀಸರ ಜೊತೆ ಹೊಯಿಕೈ ನಡೆಯಿತು. ಇದೀಗ ಪ್ರತಿಭಟನೆಗೆ ಮಣಿದ ಜಿಲ್ಲಾಡಳಿತ ಪಿಎಫ್ ಐ ಜಿಲ್ಲಾಧ್ಯಕ್ಷ ಹಮೀದ್ ಮೆಜಿಸ್ಟಿಕ್ ಬಿಡುಗಡೆಗೊಳಿಸಿದೆ ಎಂದು ತಿಳಿದು ಬಂದಿದೆ.


























