ಸುಳ್ಯ: ಪ್ರವಾಸ ಹೊರಟಿದ್ದ ಬೊಲೆರೋ ವಾಹನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ಸುಳ್ಯ ತಾಲೂಕಿನ ಅರಂತೋಡಿನಲ್ಲಿ ನಡೆದಿದೆ.
ಬಜ್ಪೆಯಿಂದ ಪ್ರವಾಸ ಹೊರಡಿದ್ದ ತಂಡದ ವಾಹನ ಇದಾಗಿದ್ದು, ಅರಂತೋಡು ಉದಯನಗರ ತಿರುವಿನಲ್ಲಿ ಅವಘಡ ಸಂಭವಿಸಿದ್ದು, ವಾಹನದಲ್ಲಿದ್ದವರಿಗೆ ಸಣ್ಣಪುಟ್ಟ ಗಾಯವಾಗಿದೆ ಎನ್ನಲಾಗಿದೆ.
ತಿರುವಿನಲ್ಲಿ ವಿದ್ಯುತ್ ಕಂಬವಿದ್ದರು ಅಲ್ಲಿಗೆ ಅತ್ಯವಶ್ಯಕವಾಗಿ ದಾರಿದೀಪ ಅಳವಡಿಸಬೇಕೆಂದು ಸ್ಥಳೀಯರು ಅಗ್ರಹಿಸಿದ್ದಾರೆ.