ಉಪ್ಪಿನಂಗಡಿ: ನಿನ್ನೆ ನಡೆದಂತಹ ಪ್ರತಿಭಟನೆ ವೇಳೆ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆಗೈದ ಪ್ರಕರಣಕ್ಕೆ ಸಂಬಧಿಸಿದಂತೆ ಪಿ.ಎಸ್.ಐ. ಓಮನ ಹಾಗೂ ಪಿ.ಎಸ್.ಐ. ಪ್ರಸನ್ನ ರವರು ನೀಡಿದ ದೂರಿನ ಮೇರೆಗೆ ಪ್ರತಿಭಟನೆಯಲ್ಲಿ ಪಾಲ್ಗೊಂಡವರ ವಿರುದ್ಧ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೆಲ ದಿನಗಳ ಹಿಂದೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಧಿಸಿದಂತೆ ಮಹಮ್ಮದ್ ಸೀನಾನ್ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಈ ಸಮಯ ಆತನಿಂದ ಇತರರಾದ ಪಿಎಫ್‌ಐ ಸಂಘಟನೆಯ ಮಹಮ್ಮದ್ ಝಕಾರಿಯಾ, ಮುಸ್ತಾಫ, ಹಮೀದ್ ರವರ ಸಂಚಿನಿಂದ ಕೃತ್ಯ ನಡೆದಿರುವುದಾಗಿ ತಿಳಿಸಿದಂತೆ ಅವರನ್ನು ವಿಚಾರಣೆಗೆ ಠಾಣೆಗೆ ಕರೆದಿದ್ದು, ಈ
ಸಮಯ ಸುಮಾರು 100 ಜನರಷ್ಟು ಎಫ್‌ಐ ಸಂಘಟನೆ ಕಾರ್ಯಕರ್ತರುಗಳು ಠಾಣೆಗೆ ಬಂದು ಹೋಗುತ್ತಿದ್ದರು. ಈ ರೀತಿಯಾಗಿ ಪದೇ ಪದೇ ಯಾಗಿ ವಿನ: ಠಾಣೆಗೆ ಠಾಣೆಗೆ ಬಂದು ಠಾಣೆಯ ಸುತ್ತಮುತ್ತ ಜಮಾಯಿಸುತ್ತಿದ್ದ ಸದ್ರಿ ಪಿಎಫ್‌ಐ ಸಂಘಟನೆ ಕಾರ್ಯಕರ್ತರಿಗೆ ಪಿಎಸ್‌ಐ ಯವರು ಹಲವು ಭಾರಿ ಹೊರಗಡೆ ಹೋಗುವಂತೆ ತಿಳುವಳಿಕೆ ನೀಡಿದರೂ ಹೊರಗಡೆ ಹೋಗಲಿಲ್ಲ.
ವಿಚಾರಣೆಗೆ ಕರೆದು ಕೊಂಡು ಬಂದವರನ್ನು ವಿಚಾರಣೆ ಮಾಡುತ್ತಿದ್ದು, ಕಾನೂನು ರೀತ್ಯ ಕ್ರಮ ಕೈಗೊಳ್ಳುವುದಾಗಿ ಅವರಿಗೆ ತಿಳುವಳಿಕೆ ನೀಡಿದ್ದರೂ, ನಂತರ
1.30 ಕ್ಕೆ ಪಿ.ಎಸ್.ಐ. ಯವರು ಮೈಕ್‌ನಲ್ಲಿ ನೆರೆದ ಜನರಿಗೆ ಕೋವಿಚ್ ನಿಯಾಮವಳಿ ಪಾಲನೆ ಮಾಡುವ
ಮೂಲಕ ನೀವುಗಳು ಇಲ್ಲಿಂದ ಚದರುವಂತ ಪ್ರಚಾರ ಮಾಡಿದ್ದರೂ ಅವರುಗಳು ಹೋಗದೇ ಅಲ್ಲಿಯೇಯಿದ್ದು, ಠಾಣೆಯ ಪರಿಸರದಲ್ಲಿ ಯಾವುದೋ ದುರುದ್ದೇಶ ಹೊಂದಿ ಅಕ್ರಮ ಕೂಟ ಸೇರಿ ರಸ್ತೆ ತಡೆ ನಡೆಸಿ ಸಾರ್ವಜನಿಕರಿಗೆ
ಭಂಗವನ್ನುಂಟು ಮಾಡಿರುತ್ತಾರೆ.
ಈ ಮಧ್ಯೆ ಮಧ್ಯಾಹ್ನ ಸಾರ್ವಜನಿಕರಿಂದ ಇಆರ್‌ಎಸ್‌ಎಸ್ ಇವರಿಗೆ ಉಪ್ಪಿನಂಗಡಿ ಠಾಣೆ ಪರಿಸರದಲ್ಲಿ ಜನ ಗುಂಪು ಸೇರುತ್ತಿರುವ ಹಾಗೂ ಕಾನೂನು ಸುವ್ಯವಸ್ಥೆಗೆ ಭಂಗವನ್ನುಂಟು ಮಾಡುವ ಬಗ್ಗೆ ದೂರು ಬಂದಿದ್ದು, ಅದರಂತೆ ಅವರು ಕೂಡಾ ಸ್ಥಳಕ್ಕೆ ಬಂದು ಪರಿಶೀಲಿಸಿ ವಿಡಿಯೋ ಚಿತ್ರೀಕರಣ ಮಾಡಿರುತ್ತಾರೆ.
ಇದಾದ ನಂತರ ಸಂಜೆ 300 ರಿಂದ 400 ಜನರು ಗುಂಪು ಸೇರಿಕೊಂಡು ನಿನ್ನೆ ರಾತ್ರಿ ತಾವು ವಶಕ್ಕೆ ತೆಗೆದುಕೊಂಡ ನೀನಾನ್ ಎಂಬಾತನನ್ನು ಮತ್ತು ನಮ್ಮ
ನಾಯಕರಾದ ಮಹಮ್ಮದ್ ಝಕಾರಿಯಾ, ಮುಸ್ತಾಫ, ಹಮೀದ್ ಇವರುಗಳನ್ನು ಬಿಡುಗಡೆ ಮಾಡುವಂತೆ
ಗುಂಪು ಸೇರಿದವರು ಬೊಬ್ಬೆ ಹಾಕಿ ಕಾನೂನು ಕೈಗೆತ್ತಿಕೊಳ್ಳುವ ಮಟ್ಟಕ್ಕೆ ತಲುಪಿ ಪೊಲೀಸರಿಗೆ ಮತ್ತು
ಇಲಾಖೆಗೆ ಧಿಕ್ಕಾರವನ್ನು ಕೂಗುತ್ತಾ ಠಾಣೆಯ ಕಡೆಗೆ ಮುಂದುವರಿದುಕೊಂಡು ಬಂದರು.
ಈ ಮಧ್ಯೆ ವಿಚಾರಣೆಗೆ ಕರೆದುಕೊಂಡು ಬಂದಿರುವ ಹಮೀದ್ ಎಂಬಾತನನ್ನು ಕಾನೂನು ರೀತ್ಯ ವಿಚಾರಣೆ ನಡೆಸಿ ಅವರಿಗೆ ಮರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಜಾರಿ ಮಾಡಿ ಆತನನ್ನು ಕಳುಹಿಸಲಾಗಿದೆ.
ಈತನನ್ನು ಕರೆದಕೊಂಡು ಪಿಎಫ್‌ಐ ಸಂಘಟನೆಯವರು ಠಾಣೆಯ ಮುಂಭಾಗ, ಉಪ್ಪಿನಂಗಡಿ ಪೇಟಿ
ಪರಿಸರಗಳಲ್ಲಿ ಮೆರವಣಿಗೆ ನಡೆಸುವ ಮೂಲಕ ಸಂಭ್ರಮಾಚರಣೆ ನಡೆಸಿರುತ್ತಾರೆ. ನಂತರ ವಾಪಾಸ್ಸು ಬಂದು
ಮಹಮ್ಮದ್ ಝಕಾರಿಯಾ ಮತ್ತು ಮುಸ್ತಾಫನನ್ನು ಬಿಡುವಂತ ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ಕಡೆಯಿಂದ ಬಿಎಫ್‌ಐ ಸಂಘಟನೆಯ ಸದಸ್ಯರುಗಳನ್ನು ಕರೆಸಿ ವಾಪಾಸ್ಸು ಠಾಣೆಯ ಎದುರು ಗುಂಪಾಗಿ ಜಮಾಯಿಸಿದ್ದು, ಈ ಸಮಯ ತಾಲೂಕು ದಂಡಾಧಿಕಾರಿಯವರಿಂದ ಕಲಂ 144 ಸಿ.ಆರ್.ಪಿ.ಸಿ ಪ್ರಕಾರ ನಿಷೇದಾಜ್ಞೆ ಜಾರಿಯಲ್ಲಿದ್ದಾಗ ಅವರುಗಳು ಪೊಲೀಸರ ವಿರುದ್ಧ ಧಿಕ್ಕಾರ ರೀತಿ ಘೋಷಣೆ ಕೂಗುತ್ತಾ ಪೊಲೀಸರನ್ನು ಹೀಯಾಳಿಸುತ್ತಾ ಅವರುಗಳು ಸಂಶಯಾಸ್ಪದವಾಗಿ ತಮ್ಮ ಮಾರಕಾಯುಧಗಳನ್ನು
ಹೊಂದುವ ಮೂಲಕ ಅಕ್ರಮವಾಗಿ ಕೂಟ ಸೇರಿಕೊಂಡು ಠಾಣೆಯ ಒಳಗಡೆ ಪ್ರವೇಶ ಮಾಡಲು
ಮುಂದದಾಗ ಇಲಾಖಾ ಪೊಲೀಸ್ ಅಧಿಕಾರಿಗಳು ಅವರುಗಳಿಗೆ ಕಾನೂನು ಕುರಿತಾಗಿ ತಿಳಿಸಿ ಬುದ್ದಿವಾದ
ಹೇಳಿದ್ದರೂ ಕೇಳದೇ ಪೊಲೀಸರನ್ನು ನಿಂದಿಸುತ್ತಾ ಪೊಲೀಸರ ಮೇಲೆಯೇ ದಾಳಿ ನಡೆಸುವ ರೀತಿಯಲ್ಲಿ
ಮುಂದುವರಿದಾಗ ಠಾಣೆಯಲ್ಲಿದ್ದ ಮಹಿಳಾ ಎಸ್‌ಐ ಓಮನ ಮತ್ತು ಮಹಿಳಾ ಸಿಬ್ಬಂದಿಗಳು ಮತ್ತು ಇತರೇ
ಸಿಬ್ಬಂದಿಗಳು ಅವರುಗಳನ್ನು ತಡೆಯಲು ಮುಂದಾದಾಗ ಸೇರಿದ್ದ ಗುಂಪಿನ ಜನರು ಅವರುಗಳ ಮೇಲೆ ಕೈ ಮಾಡಿ ಹಲ್ಲೆ ನಡೆಸಿದ ವೇಳೆ ಸ್ಥಳದಲ್ಲಿದ್ದ ಇತರೇ ಪೊಲೀಸ್ ಅಧಿಕಾರಿಗಳು ಪರಿಸ್ಥಿತಿ ವಿಷಮಕ್ಕೆ ಹೋಗುವ ಸನ್ನಿವೇಶ ಅರಿತು ಅವರುಗಳನ್ನು ಚದುರಿಸಲು ಮುಂದಾದಾಗ ಸೇರಿದ ಗುಂಪಿನಲ್ಲಿದ್ದವರು ತಾವು ಮೊದಲೇ ಪಿತೂರಿ ನಡೆಸಿ ಸ್ಥಳದಲ್ಲಿ ತಂದಿರಿಸಿದ್ದ ಆಂಬ್ಯುಲೆನ್ಸ್ ವಾಹನದಲ್ಲಿ ತಂದಿದ್ದ ಮಾರಕಾಯುಧಗಳನ್ನು ಹೊರಕ್ಕೆ ತೆಗೆದು ಸೋಡಾ ಬಾಟಲಿ ಹಾಗೂ ಮಾರಕಾಯುಧಗಳಿಂದ ಪೊಲೀಸರ ಮೇಲೆ ದಾಳಿ ನಡೆಸಿದ ವೇಳೆ ಸ್ಥಳದಲ್ಲಿದ್ದ ಬಂಟ್ವಾಳ ಪೊಲೀಸ್ ಉಪನಿರೀಕ್ಷಕರಾದ ಪ್ರಸನ್ನ ಕುಮಾರ್ ಇವರಿಗೆ ಚಾಕುವಿನಿಂದ ಇರಿದ ಪರಿಣಾಮ ಅವರ ಎಡ ಕೈಯ ಅಂಗೈಗೆ ರಕ್ತಗಾಯವಾಗಿದ್ದಲ್ಲದೇ, ಪುತ್ತೂರು ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ಡಾ. ಗಾನ ಪಿ ಕುಮಾರ್ ಇವರಿಗೆ ಕಲ್ಲು ತೂರಾಟದಿಂದಾಗಿ ಎಡ ಕೈಗೆ ಕಲ್ಲು ತಾಗಿ ನೋವುಂಟಾಗಿರುತ್ತದೆ.
ಬಳಿಕ ಪೊಲೀಸರು ತಮ್ಮ ಆತ್ಮರಕ್ಷಣೆ ನಿಮಿತ್ತ ಲಾಠಿ ಪ್ರಹಾರ ನಡೆಸಿದ ಸಮಯ ಸೇರಿದ ಜನರು ಒಮ್ಮೆಲೇ ಸ್ಥಳದಿಂದ ಓಡಿ ಹೋಗುತ್ತಾ ಒಬ್ಬಾರ ಮೇಲೊಬ್ಬರು ಬಿದ್ದು, ಓಡಾಡುತ್ತಾ, ಮಸೀದಿ ಬಳಿ ಓಡಿ, ಸ್ಥಳದಲ್ಲಿ ಕಂಪೌಂಡ್ ಗೋಡೆ ಹಾರಲು ಯತ್ನಿಸುತ್ತಾ ಇದ್ದು, ಎದ್ದು ಓಡಾಡುತ್ತಾ ಇದ್ದು, ಅಲ್ಲದೇ ಕೆಲವಾರು ಜನರು ಮಸೀದಿಯ ಒಳ ಪ್ರವೇಶಿಸಿ ಪೊಲೀಸರ ಮೇಲೆ ಕಲ್ಲು, ಸೋಡಾ ಬಾಟ್ಲಿ ಇತ್ಯಾದಿಗಳನ್ನು ಎಸೆಯುತ್ತಾ ದಾಳಿ ನಡೆಸುತ್ತಾ ಸ್ಥಳದಲ್ಲಿದ್ದ ಇಲಾಖಾ ವಾಹನಗಳನ್ನು, ಸಾರ್ವಜನಿಕರ ವಾಹನಗಳನ್ನು ಜಖಂ ಮಾಡಿರುತ್ತಾರೆ.
ಅವರುಗಳನ್ನು ಸ್ಥಳದಿಂದ ಚದುರಿಸುವ ನಿಟ್ಟಿನಲ್ಲಿ ಪೂರ್ಣ ರೀತಿಯಲ್ಲಿ ಪ್ರಯತ್ನ ನಡೆಸಲಾಗಿರುತ್ತದೆ.
ಸೇರಿದ ಪಿಎಫ್‌ಐ ಸಂಘಟನೆಯ ಗುಂಪಿನವರು ಪೊಲೀಸರ ಮೇಲೆ ಹಲ್ಲೆ ನಡೆಸುವ ನಿಟ್ಟಿನಿಂದಲೇ ಈ ರೀತಿಯಾಗಿ ಗುಂಪು ಸೇರಿ ಕೃತ್ಯ ನಡೆಸಿರುವುದಾಗಿದೆ. ಅಲ್ಲದೇ
ಸೇರಿದವರು ಬಳಿಕ ಕೂಡಾ ಪೊಲೀಸ್ ಠಾಣೆಯ ಸುತ್ತ ಕಲ್ಲು ತೂರಾಟ ನಡೆಸುವ ಮೂಲಕ ಠಾಣೆಯ ಕಿಟಕಿ
ಗಾಜುಗಳನ್ನು ಹುಡಿ ಮಾಡಿ ಪೊಲೀಸರ ಮೇಲೆ ಹಲ್ಲೆಗೆ ಮುಂದಾಗಿರುತ್ತಾರೆ.
ಈ ಘಟನೆಯಿಂದಾಗಿ ಪೊಲೀಸ್ ಇಲಾಖೆಯ ಪೊಲೀಸ್ ಉಪಾಧೀಕ್ಷಕರಾದ ಈ ಗಾನ. ಪಿ.ಕುಮಾರ್, ಬಂಟ್ವಾಳ ಗ್ರಾಮಾಂತರ ಠಾಣೆಯ ಪಿಎಸ್‌ಐ ಪ್ರಸನ್ನ, ಸಿಪಿಐ ಉಮೇಶ್ ಉವಳಕೆ, ಪೊಲೀಸ್ ಉಪನಿರೀಕ್ಷರಾದ
ಓಮನ, ಸಿಬ್ಬಂದಿಗಳಾದ ಕಿರಣ್ ಕುಮಾರ್,ರೇಣುಕಾ, ಬಿಸಿ ಶರೀಫ್, ಏಸಿ ಶೇಷಾದ್ರಿ, ಹೆಚ್‌ಸಿ ಹರೀಶ್, ಇವರುಗಳಿಗೂ ಹಲ್ಲೆ ನಡೆಸಿ ಅವರುಗಳ ಇಲಾಖಾ ಸಮವಸ್ತ್ರಗಳನ್ನು ಎಳೆದು ಹರಿದಾಡಿದ್ದು, ಅವರಿಗೂ ಗಾಯಗಳಾಗಿದೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಈ ಬಗ್ಗೆ ಠಾಣೆಯಲ್ಲಿ 152/2021 ಕಲಂ 152/2021 ಕಲಂ 143,147,148,151, 324.332, 326.307, ಜೊತೆಗೆ
149 ಭಾ.ಧ.ಸಂ. ರಂತೆ ಪ್ರಕರಣ ದಾಖಲಾಗಿದೆ.