ಬಂಟ್ವಾಳ: ಕಲ್ಲಿದ್ದಲು ಸಾಗಾಟದ ಲಾರಿಯೊಂದು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಮಧ್ಯೆ ಪಲ್ಟಿಯಾದ ಘಟನೆ ತುಂಬೆ ಎಂಬಲ್ಲಿ ಬುಧವಾರ ಮಧ್ಯರಾತ್ರಿ ವೇಳೆ ನಡೆದಿದೆ.
ಮಂಗಳೂರು ಬಂದರಿನಿಂದ ಕಲ್ಲಿದ್ದಲು ತುಂಬಿಸಿದ ಲಾರಿ ಬಳ್ಳಾರಿ ಕಡೆಗೆ ಸಾಗುತ್ತಿದ್ದ ಸಂದರ್ಭದಲ್ಲಿ ತುಂಬೆ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ.
ಘಟನೆಯಿಂದ ಲಾರಿ ಚಾಲಕನಿಗೆ ಅಲ್ಪಸ್ವಲ್ಪ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ನಡೆದ ಬಳಿಕ ಕೆಲ ಗಂಟೆಗಳ ಕಾಲ ರಸ್ತೆಯಲ್ಲಿ ಸಂಚಾರಕ್ಕೆ ಆಡ್ಡಿಯಾಗಿತ್ತು. ಮೆಲ್ಕಾರ್ ಟ್ರಾಫಿಕ್ ಎಸ್.ಐ ರಾಜೇಶ್ ಹಾಗೂ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಸಂಚಾರಕ್ಕೆ ಅನುಕೂಲ ಮಾಡಿದರು.
ಲಾರಿ ಪಲ್ಟಿಯಾದ ಘಟನೆಯಿಂದ ಲಾರಿಯ ಡಿಸೇಲ್ ಟ್ಯಾಂಕ್ ಗೆ ಹಾನಿಯಾಗಿದ್ದು ರಸ್ತೆಯ ತುಂಬಾ ಹರಿದಿತ್ತು.ಇದರಿಂದ ವಾಹನಗಳ ಅಪಘಾತವಾಗುವ ಸಾಧ್ಯತೆಗಳು ಹೆಚ್ಚು ಇದೆ ಎಂದು ಮನಗಂಡ ಎಸ್.ಐ.ರಾಜೇಶ್ ಅವರು ಅಗ್ನಿಶಾಮಕ ದಳದವರನ್ನು ಕರೆಸಿ ನೀರು ಹಾಯಿಸಿ ರಸ್ತೆಯಲ್ಲಿ ಹರಿದ್ದಿದ್ದ ಡಿಸೇಲ್ ತೆರವು ಮಾಡಿಸಿದರು.