ಪುತ್ತೂರು: ಕಾರ್ಕಳದಲ್ಲಿ ಸಮಾವೇಶವೊಂದರಲ್ಲಿ ಭಾಷಣ ಮಾಡಿದ ಮಹಿಳೆಯೋರ್ವರು ಮುಸ್ಲಿಂರು ದಿನದಲ್ಲಿ ಐದು ಭಾರಿ ಕೂಗುವ ಆಝಾನ್ ಕರೆ ಅದು ಕಾಫಿರರನ್ನು ಕೊಲ್ಲಿ ಎಂದು ಹೇಳುವುದಾಗಿದೆ ಎಂದು ಪ್ರಚೋಧನಕಾರಿಯಾಗಿ ಮಾತನಾಡಿದ್ದಾರೆ ಇದು ದೇಶದ್ರೋಹಿ ಕೆಲಸವಾಗಿದೆ, ಅಝಾನ್ ಕರೆ ಕೊಲ್ಲುವುದೇ ಆಗಿದ್ದರೆ ಜಗತ್ತಿನಲ್ಲಿ ಮುಸ್ಲಿಮರು ಮಾತ್ರ ಇರುತ್ತಿದ್ದರು, ಭಾರತದಲ್ಲಿ 800 ವರ್ಷಗಳ ಕಾಲ ಆಳಿದ ಮೊಘಲರು ಯಾರನ್ನೂ ಬಿಡುತ್ತಿರಲಿಲ್ಲ ಆದರೆ ಯಾರೂ ಮುಸ್ಲಿಮೇತರರನ್ನು ಕೊಲ್ಲುವ ಕೆಲಸವನ್ನು ಮಾಡಿಲ್ಲ, ಮಾಡುವುದೂ ಇಲ್ಲ, ಹಿಂಸೆ ಇಸ್ಲಾಂನ ಸಂಸ್ಕೃತಿಯಲ್ಲ ಎಂದು ಮೊಹಮ್ಮದ್ ಹನೀಫ್ ನಿಝಾಮಿ ಹೇಳಿದರು.
ಕುಂಬ್ರದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಅವರು, ಪ್ರಚೋಧನಕಾರಿ ಭಾಷಣ ಮಾಡಲು ಎಲ್ಲರಿಗೂ ಸಾಧ್ಯವಾಗುತ್ತದೆ ಆದರೆ ಭಾಷಣ ಕೇಳಿದ ಅಮಾಯಕರು ಸುಳ್ಳನ್ನು ಸತ್ಯ ಎಂದೇ ನಂಬಿ ಗಲಭೆ ಮಾಡಿದರೆ ಸಾಯುವುದು ಜನ ಸಾಮಾನ್ಯ. ಭಾಷಣ ಮಾಡಿದವ ಸೇಫಾಗಿರುತ್ತಾನೆ. ಕೋಮುಗಲಭೆಗೆ ಇಸ್ಲಾಂ ಪ್ರಭಲ ವಿರೋಧಿಯಾಗಿದೆ. ತನ್ನ ಧರ್ಮವನ್ನು ಪಾಲನೆ ಮಾಡುವುದರ ಜೊತೆಗೆ ಇತರೆ ಧರ್ಮವನ್ನು ಗೌರವಿಸಿ ಎಂದು ಇಸ್ಲಾಂ ಕಲಿಸುತ್ತದೆ, ಕೋಮು ಪ್ರಚೋಧನೆ ಮಾಡಬಾರದು ಎಂಬುದನ್ನು ಇಸ್ಲಾಂ ನಮಗೆ ಕಲಿಸಿದೆ ಎಂದು ಹೇಳಿದ ಅವರು ಎಲ್ಲಾ ಧರ್ಮದವರೂ ಒಟ್ಟಾಗಿ ಸುಂದರ ಭಾರತವನ್ನು ಕಟ್ಟಬೇಕಿದೆ ಅದಕ್ಕೆ ಎಲ್ಲರೂ ಕಟಿಬದ್ದರಾಗಬೇಕು, ದೊಂಬಿ ಗಲಭೆಯಿಂದ ಸಾಧಿಸಿದವರೂ ಯರೂ ಇಲ್ಲ ಕೊನೆಗೆ ಅನಾಥರಾದವರೇ ಹೆಚ್ಚು ಎಂದು ಹೇಳಿದರು.