ವಿಟ್ಲ: ನಿವೃತ್ತ ಉಪ ತಹಶೀಲ್ದಾರ್ ಹಾಗೂ ಸಂಘಪರಿವಾರದ ಮುಖಂಡ ಸೋಮಪ್ಪ ದೇವಾಡಿಗ(72) ಡಿ.18 ರಂದು ನಿಧನರಾದರು.
ಬಾಲ್ಯದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಸ್ವಯಂಸೇವಕರಾಗಿ ಕೆಲಸ ಮಾಡಿದ್ದ ಇವರು ನಂತರ ಕಂದಾಯ ಇಲಾಖೆಯ ನೌಕರನಾಗಿ ಸರ್ಕಾರಿ ಕೆಲಸಕ್ಕೆ ಸೇರಿದ್ದರು. ತಳ ಮಟ್ಟದ ನೌಕರನಾಗಿ ಕೆಲಸಕ್ಕೆ ಸೇರಿದ್ದ ಇವರು ತನ್ನ ಸೇವಾನಿಷ್ಠೆಯಿಂದ ಹಂತ ಹಂತವಾಗಿ ಭಡ್ತಿಯನ್ನು ಪಡೆದು ಉಪ ತಹಶೀಲ್ದಾರ್ ಆಗಿ ನಿವೃತ್ತಿಯಾದರು.
ತನ್ನ ಸೇವಾ ಅವಧಿಯಲ್ಲಿ ಅನೇಕ ಬಡವರಿಗೆ, ಅಸಹಾಯಕರಿಗೆ ಸಹಾಯವನ್ನು ಮಾಡಿದ್ದರು. ನಿವೃತ್ತಿಯ ಬಳಿಕ ವಿಟ್ಲ ಪ್ರಖಂಡ ವಿಶ್ವ ಹಿಂದೂ ಪರಿಷತ್ತಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ವಿಟ್ಲ ಪ್ರಖಂಡದ ಗ್ರಾಮ ಗ್ರಾಮಗಳಲ್ಲಿ ವಿಹಿಂಪ ಹಾಗೂ ಬಜರಂಗದಳದ ಸಮಿತಿಗಳನ್ನು ರಚಿಸಿದ್ದರು, ಅನೇಕ ಅಭ್ಯಾಸವರ್ಗಗಳು, ದತ್ತಪೀಠದ ಮೆರವಣಿಗೆಗಳು , ಸಮಾವೇಶಗಳನ್ನು ತನ್ನ ನೇತೃತ್ವದಲ್ಲಿ ನಡೆಸಿದ್ದರು. ನಂತರ ಪುತ್ತೂರು ಜಿಲ್ಲಾ ವಿಶ್ವ ಹಿಂದೂ ಪರಿಷತ್ತಿನ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
ಮೃತರು ಪತ್ನಿ, ಬಿಸಿರೋಡಿನ ಖ್ಯಾತ ನ್ಯಾಯವಾದಿ ಯಶವಂತ್ ದೇವಾಡಿಗ, ಉಪನ್ಯಾಸಕಿ ಜಯಶ್ರೀ ಹಾಗೂ ಅನೇಕ ಅಭಿಮಾನಿ ಬಳಗವನ್ನು ಅಗಲಿದ್ದಾರೆ.