ಬಂಟ್ವಾಳ: ಕೋವಿಡ್ ನಿಂದಾಗಿ ಮೃತರಾದ ಬಿಪಿಎಲ್ ಕಾರ್ಡ್ ನ ಬಡವರ್ಗದವರಿಗೆ ಒಂದು ಲಕ್ಷ ರೂ. ಪರಿಹಾರ ಧನದ ಚೆಕ್ ಅನ್ನು ಪುತ್ತೂರಿನ ಶಾಸಕರಾದ ಸಂಜೀವ ಮಠಂದೂರು ವಿತರಿಸಿದರು.
ಇಡ್ಕಿದು ಗ್ರಾಮದ ಸುವರ್ಣ ಸೌಧದಲ್ಲಿ ಕಾರ್ಯಕ್ರಮ ನಡೆಯಿತು. ಕೋವಿಡ್ ನಿಂದಾಗಿ ಮೃತರಾದ ಅಳಿಕೆ ಗ್ರಾಮದ ಒಬ್ಬರಿಗೆ, ಕೆದಿಲ ಗ್ರಾಮದ ಒಬ್ಬರಿಗೆ, ವಿಟ್ಲಮುಡ್ನೂರಿನ ಇಬ್ಬರಿಗೆ ಪರಿಹಾರಧನ ನೀಡಲಾಗಿದ್ದು, ಮೃತರ ಕುಟುಂಬಸ್ಥರು ಚೆಕ್ ಅನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಇಡ್ಕಿದು ಗ್ರಾಮ ಪಂಚಾಯತ್ ಸದಸ್ಯರಾದ ಸುದೀಪ್ ಕುಮಾರ್ ಶೆಟ್ಟಿ, ಸದಸ್ಯರಾದ ಚಿದಾನಂದ ಪಲ್ಕಿಂಜೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗೋಕುಲ್ ದಾಸ್, ಇಡ್ಕಿದು ಗ್ರಾಮಕರಣೀಕರಾದ ಮಂಜುನಾಥ್, ಕೆದಿಲ ಗ್ರಾಮಕರಣೀಕರಾದ ವಿನೋದ್, ವಿಟ್ಲಮುಡ್ನೂರ್ ಗ್ರಾಮಕರಣೀಕರಾದ ಕರಿಬಸಪ್ಪ, ಅಳಿಕೆ ಗ್ರಾಮದ ಸತೀಶ್, ವಿಟ್ಲ ಹೋಬಳಿಯ ಕಂದಾಯ ನಿರೀಕ್ಷರ ಕಚೇರಿ ಗ್ರಾಮ ಸೇವಕರಾದ ಗಿರೀಶ್ ವಿಟ್ಲ, ಇಡ್ಕಿದು ಗ್ರಾಮ ಸೇವಕರಾದ ಯತೀಶ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.