ಮಂಗಳೂರು: ಸ್ಯಾಂಡಲ್ ವುಡ್ ನಲ್ಲಿ ವಿಶೇಷ ಕಥಾ ಹಂದರ ಹೊಂದಿರುವ,ವಿಭಿನ್ನ ಟೈಟಲ್ ಮೂಲಕವೇ ಜನರ ಗಮನ ಸೆಳೆದಿರುವ “ಹರೀಶ ವಯಸ್ಸು 36” ಇದರ ಫಸ್ಟ್ ಲುಕ್ ಪೋಸ್ಟರ್ ಪದ್ಮವಿಭೂಷಣ ರಾಜರ್ಷಿ ಡಾ.ವೀರೇಂದ್ರ ಹೆಗ್ಗಡೆಯವರ ಅಮೃತ ಹಸ್ತದಿಂದ ಧರ್ಮಸ್ಥಳದಲ್ಲಿ ಬಿಡುಗಡೆಗೊಂಡಿತು.
ಈ ಸಂದರ್ಭದಲ್ಲಿ ಚಿತ್ರದ ನಿರ್ದೇಶಕ ಗುರುರಾಜ್ ಜೇಷ್ಠ, ಚಿತ್ರನಟ ಯೋಗೀಶ್ ಶೆಟ್ಟಿ, ವಿಷ್ಣು, ಜಿ ಹಾಗೂ ಥಾಮಸ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
ಕರಾವಳಿಯ ಪ್ರತಿಭಾನ್ವಿತರನ್ನು ಸೇರಿಸಿಕೊಂಡು ಅಚ್ಚ ದೇಸಿ ಸೊಗಡಿನ ಚಿತ್ರವೊಂದು ನಿರ್ಮಾಣವಾಗಿ ಕಲಾ ರಂಗಕ್ಕೆ ಕೊಡುಗೆಯಾಗುತ್ತಿರುವುದರ ಬಗ್ಗೆ ಡಾ.ವೀರೇಂದ್ರ ಹೆಗ್ಗಡೆಯವರು ಸಂತೋಷ ವ್ಯಕ್ತಪಡಿಸಿ ಶುಭ ಹಾರೈಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಖ್ಯಾತಿ ಚಿತ್ರದ ಜೋಸೆಫ್ ಪಾತ್ರಧಾರಿ, ಮೂಲತಃ ಮಂಜೇಶ್ವರದ ಯೋಗಿಶ್ ಶೆಟ್ಟಿ ಕಡಂಬಾರ್ ಅವರು ಸಂಪೂರ್ಣವಾಗಿ ನಾಯಕನಟನಾಗಿ ಅಭಿನಯಿಸಿರುವ ಮಂಗಳೂರು ಮೂಲದ ಗುರುರಾಜ್ ಜೇಷ್ಠ ಅವರ ನಿರ್ದೇಶನದ ಚೊಚ್ಚಲ ಸಿನಿಮಾ ಇದಾಗಿದೆ.ಕನ್ನಡ,ತುಳು,ಮಲೆಯಾಳ ಹೀಗೆ ತ್ರಿಭಾಷಾ ಚಿತ್ರೊದ್ಯಮದಲ್ಲಿ ಪಳಗಿದ ಮೋಹನ್ ಪಡ್ರೆ ಅವರ ಛಾಯಾಗ್ರಹಣದಲ್ಲಿ ಕರಾವಳಿ ಭಾಗಗಳಲ್ಲಿ ಸಂಪೂರ್ಣ ಚಿತ್ರೀಕರಣ ನಡೆದಿರುವುದರಿಂದ ಇಲ್ಲಿನ ಸಂಸ್ಕೃತಿ- ಸಂಸ್ಕಾರದ ದೇಸಿ ಸೊಗಡನ್ನು ಚಿತ್ರ ಬಿಂಬಿಸಲಿದೆ.