ಉಳ್ಳಾಲ: ಖಾಸಗಿ ವಸತಿ ಸಂಕೀರ್ಣದಲ್ಲಿದ್ದ ನಾಟೆಕಲ್ ಖಾಸಗಿ ಕಾಲೇಜಿನ ಅಂತಿಮ ವರ್ಷದ ವೈದ್ಯಕೀಯ ವಿದ್ಯಾರ್ಥಿನಿ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುತ್ತಾರು ಬಳಿ ನಡೆದಿದೆ.
ಮೃತರನ್ನು ಬೀದರ್ ಆನಂದನಗರ ನಿವಾಸಿ ವೈಶಾಲಿ ಗಾಯಕವಾಡ್(25) ಎನ್ನಲಾಗಿದೆ.
ವೈಶಾಲಿ ನಾಟೆಕಲ್ ಕಣಚೂರು ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪದವಿ ಮುಗಿಸಿ ಅಲ್ಲೇ ಇಂಟರ್ನ್ ಶಿಪ್ ನಡೆಸುತ್ತಿದ್ದರು.
ಕುತ್ತಾರು ಸಿಲಿಕೋನಿಯಾ ಅಪಾರ್ಟ್ ಮೆಂಟಿನ ರೂಮಿನಲ್ಲಿ ಫ್ಯಾ ನಿಗೆ ನೇಣುಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಕಾರಣ ತಿಳಿದುಬಂದಿಲ್ಲ. ಉಳ್ಳಾಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


























